ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾರ್ಚ್ 10 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್.11 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
READ | ಶಿವಮೊಗ್ಗದಲ್ಲಿ ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ಸ್, ಯುವಕ, ಯುವತಿಯರಿಂದ ರೈನ್ ಡ್ಯಾನ್ಸ್
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ವಿನೋಬನಗರ ಶಿವಾಲಯ ಹತ್ತಿರ ಮತ್ತು ಹಿಂಭಾಗ, ಮೇದಾರಕೇರಿ ವೃತ್ತ, 60 ಅಡಿ ರಸ್ತೆ, ಭಾಗ್ಯಾರಾಮ್ ಆಸ್ಪತ್ರೆ, ಶುಭಮಂಗಳಾ ಮುಂಭಾಗ, ಸಾಯಿಬಾಬಾ ದೇವಸ್ಥಾನ, ಲಕ್ಷ್ಮೀ ಚಿತ್ರಮಂದಿರ ಮುಂಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.