Shimoga railway station | ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಪತ್ತೆಯಾದ ಬಾಕ್ಸ್ ಗಳಲ್ಲೇನಿತ್ತು?, ಎಸ್.ಪಿ ಹೇಳಿದ್ದೇನು?

Bomb Sqad BDDS

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರೈಲ್ವೆ ನಿಲ್ದಾಣ (shimoga railway station-SMET) ಸಮೀಪ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಎರಡು ಬಾಕ್ಸ್ ಗಳ‌ಲ್ಲಿ ಬಿಳಿ ಬಣ್ಣದ ಪುಡಿ ಪತ್ತೆಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ಬಾಕ್ಸ್ ಗಳಲ್ಲಿ (G.K.Mithun Kumar) ಯಾವುದೇ ರೀತಿಯ ಸ್ಫೋಟಕ ಪತ್ತೆಯಾಗಿಲ್ಲ‌. ಬೆಂಗಳೂರಿನಿಂದ bomb detection and disposal squads (ಬಿಡಿಡಿಎಸ್)ವು ಬಾಕ್ಸ್ ಪರಿಶೀಲಿಸಿದೆ’ ಎಂದಿದ್ದಾರೆ.

BDDS Bomb squad railway station

READ |  ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಅನುಮಾನಾಸ್ಪದ ಬಾಕ್ಸ್ ಪತ್ತೆ, ಆಪರೇಷನ್ ಗೆ ಮಳೆ ಅಡ್ಡಿ, ಇದುವರೆಗಿನ ಬೆಳವಣಿಗೆಗಳೇನು?

ನಗರದ ರೈಲ್ವೆ ನಿಲ್ದಾಣ ಸಮೀಪ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಬಾಕ್ಸ್ ಗಳ‌ ಪರಿಶೀಲನೆಗೆಂದು ಬೆಂಗಳೂರಿನಿಂದ ಐದು ಸದಸ್ಯರಿದ್ದ ಬಿಡಿಡಿಎಸ್ ತಂಡ ಆಗಮಿಸಿತ್ತು. ಭಾರೀ‌ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದಾರೆ.
ಸ್ಫೋಟಿಸಿ ಬೀಗ ಮುರಿದು ಪರಿಶೀಲನೆ
ಬಾಕ್ಸ್ ಗಳಿಗೆ ಜಡಿಯಲಾಗಿದ್ದ ಬೀಗವನ್ನು ಸ್ಫೋಟಿಸಿ ಮುರಿಯಲಾಗಿದೆ. ನಂತರ, ಒಳಗೆ ಬಿಳಿ ಬಣ್ಣದ ಪುಡಿ ಕಂಡುಬಂದಿದೆ. ಬೆಳಗಿನ ಜಾವ ಮೂರೂವರೆ‌ ಸುಮಾರಿಗೆ ಬೀಗ ಒಡೆದಿದ್ದು, ಬಿಡಿಡಿಎಸ್ ತಂಡ ಪರಿಶೀಲನೆ ನಡೆಸಿತ್ತು.
ಸ್ಥಳಕ್ಕೆ ಭೇಟಿ‌ ನೀಡಿರುವ ಶಾಸಕ‌ ಚನ್ನಬಸಪ್ಪ, ‘ಬಿಳಿ ಬಣ್ಣದ ಪೌಡರ್ ಸಿಕ್ಕಿದ್ದು, ಅದೇನು ಎನ್ನುವುದನ್ನು ಪರಿಶೀಲಿಸಬೇಕು. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

error: Content is protected !!