Kuvempu university | ಪದವಿ ವಿದ್ಯಾರ್ಥಿಗಳ ಗಮನಕ್ಕೆ, ಸ್ನಾತಕೋತ್ತರ ಪದವಿ ಪ್ರವೇಶಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ, ಹೊಸ ವೇಳಾಪಟ್ಟಿ ಇಲ್ಲಿದೆ

Kuvempu University Administration buliding

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ (Kuvempu university)ವು 2023-24ನೇ ಸಾಲಿನ ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ್ದ ಕೊನೆಯ ದಿನಾಂಕವನ್ನು ನವೆಂಬರ್ 15ಕ್ಕೆ ವಿಸ್ತರಿಸಿದೆ.

READ | ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದ ಟ್ರಂಕ್ ಇಟ್ಟವರ‌್ಯಾರು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್, ಏಳು ಗಂಟೆಗಳ ಬಾಂಬ್ ನಿಷ್ಕ್ರಿಯ ದಳದ ಆಪರೇಷನ್

ವಿವಿಯು ಜ್ಞಾನಸಹ್ಯಾದ್ರಿ ಕ್ಯಾಂಪಸ್, ತನ್ನ ವ್ಯಾಪ್ತಿಯ ಎಲ್ಲ ಪಿಜಿ ಸೆಂಟರ್‌ಗಳು ಹಾಗೂ ಕಾಲೇಜುಗಳಲ್ಲಿನ ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯು (Unified University and College Management System- UUCMS) ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಈ ಮೊದಲು ಅರ್ಜಿ ಸಲ್ಲಿಕೆಗೆ ನವೆಂಬರ್ 5ರಂದು ಕೊನೆಯ ದಿನಾಂಕವಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸಲು ನವೆಂಬರ್ 15 ಅನ್ನು ಕೊನೆಯ ದಿನಾಂಕವೆಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.
ಹೊಸ ವೇಳಾಪಟ್ಟಿ ಅನ್ವಯ ನ. 23ರಂದು ಅರ್ಜಿ ಸಲ್ಲಿಸಿದವರ ವಿಷಯವಾರು ಮೆರಿಟ್ ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ ಹಾಗೂ ನ. 27-29 ರ ವರೆಗೆ ಪ್ರವೇಶಾತಿ ಕೌನ್ಸೆಲಿಂಗ್ ನಡೆಯಲಿದೆ.

error: Content is protected !!