Shimoga airport | ಮೊದಲ ದಿನವೇ 400ಕ್ಕೂ ಅಧಿಕ ಜನ ಸಂಚಾರ, ಶಿವಮೊಗ್ಗ-ಹೈದ್ರಾಬಾದ್, ತಿರುಪತಿ, ಗೋವಾ ವಿಮಾನಕ್ಕೆ ಬೇಡಿಕೆ

Star Flight

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರದಿಂದ ದೇಶದ ಮೂರು ಪ್ರಮುಖ ನಗರಗಳಿಗೆ ಸ್ಟಾರ್ ಏರ್ ಲೈನ್ಸ್ ವಿಮಾನ ಸಂಚಾರ ಮಂಗಳವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ. ಮೊದಲ ದಿನವೇ ಸುಮಾರು 400ಕ್ಕೂ ಅಧಿಕ‌ ಜನ ಪ್ರಯಾಣಿಸಿದರು.
ಶಿವಮೊಗ್ಗದಿಂದ ಹೈದ್ರಾಬಾದ್, ತಿರುಪತಿ ಮತ್ತು ಗೋವಾ ಮಾರ್ಗಗಳಿಗೆ ಶೇ.70ಕ್ಕೂ ಅಧಿಕ ಸೀಟುಗಳು ಭರ್ತಿ ಆಗಿದ್ದವು.

Star Flight 1
ಮಲೆನಾಡಿನ ಬಾನಂಗಳದಲ್ಲಿ ಸ್ಟಾರ್ ಏರ್ ಲೈನ್ಸ್ ವಿಮಾನ.

READ | ಶಿವಮೊಗ್ಗದಿಂದ ಹೈದ್ರಾಬಾದ್, ತಿರುಪತಿ, ಗೋವಾ ವಿಮಾನದ ವೇಳಾಪಟ್ಟಿ, ದರದ ಮಾಹಿತಿ ಇಲ್ಲಿದೆ

ವಿಮಾನ ಬರಮಾಡಿಕೊಂಡ ಸಂಸದರು
ಹೈದ್ರಾಬಾದ್ ನಿಂದ ಆಗಮಿಸಿದ ಮೊದಲ ಸ್ಟಾರ್ ವಿಮಾನವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಸಂಸದ ರಾಘವೇಂದ್ರ, ಮಲೆನಾಡಿನಿಂದ ತಿರುಪತಿ, ಗೋವಾ ಮತ್ತು ಹೈದ್ರಾಬಾದ್‌ಗೆ ಸಂಚರಿಸುವ ಪ್ರಯಾಣಿಕರಿಗೆ ಸೇವೆ ಒದಗಿಸಲು  ಸ್ಟಾರ್ ವಿಮಾನ ಸಂಸ್ಥೆ ಮುಂದಾಗಿದೆ. ಮೊದಲನೇ ದಿನವೇ 400 ಪ್ರಯಾಣಿಕರು ಸಂಚರಿಸುವುದು ವಿಶೇಷವಾಗಿದೆ ಎಂದರು.
ವಿಮಾನ ಹಾರಾಟವು ಉಡಾನ್‌ ಯೋಜನೆಯಡಿ ಆರಂಭಿಸಲಾಗಿದ್ದು, ಕೈಗಾರಿಕೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಈ ವಿಮಾನ ನಿಲ್ದಾಣ ಪೂರಕವಾಗಲಿದೆ. ಸ್ಪೈಸ್ ಜೆಟ್ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ಶಿವಮೊಗ್ಗಕ್ಕೆ ಬರಲು ಆಸಕ್ತಿ ವ್ಯಕ್ತಪಡಿಸಿವೆ. ಇನ್ನು ನಿಲ್ದಾಣದಲ್ಲಿನ ಮಂಜಿನ ವಾತಾವರಣ ಮತ್ತು ತಾಂತ್ರಿಕ ದೋಷಗಳ ಕುರಿತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್ ಒಳಗೆ ನೈಟ್ ಲ್ಯಾಂಡಿಂಗ್
ಶಿವಮೊಗ್ಗ ಏರ್ ಪೋರ್ಟ್ ಮತ್ತಷ್ಟು ಅಭಿವೃದ್ಧಿ ಹೊಂದಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕೂಡ ಡಿಸೆಂಬರ್ ವೇಳೆಗೆ ಆರಂಭವಾಗಲಿದೆ. ಕಡಿಮೆ ಖರ್ಚಿನಲ್ಲಿ ಸುಂದರ ಏರ್ ಪೋರ್ಟ್ ನಿರ್ಮಿಸಿರುವುದು ಮಲೆನಾಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

error: Content is protected !!