ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೈಸೂರು ಹುಡುಗಿಯ ಮೋಹದ ಬಲೆಗೆ ಬಿದ್ದ ಭದ್ರಾವತಿ ಯುವಕ ಪೊಲೀಸ್ ಠಾಣರ ಮೆಟ್ಟಿಲೇರಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಲ್ಪಿಸಲಾಗಿದೆ.
ಹನಿಟ್ರಾಪ್ ನಡೆಸುತ್ತಿದ್ದ ಮೈಸೂರು ಮೂಲದ ಐವರನ್ನು ಭದ್ರಾವತಿ ಟೌನ್ ಠಾಣೆ ಪೊಲೀಸರು ಬಂದಿಸಿದ್ದಾರೆ.
READ | ಹುಣಸೆ ಮರ ಕಸದ ವಿಚಾರವಾಗಿ ನಡೀತು ಕೊಲೆ, ನಾಲ್ಕು ಜನರಿಗೆ ಜೀವಾವಧಿ ಶಿಕ್ಷೆ
ಹುಡುಗಿ- ಹುಡುಗ ಬಸ್ ನಲ್ಲಿ ಪರಿಚಯ
ಭದ್ರಾವತಿ ಮೂಲದ ಯುವಕನ ದೂರಿನ ಆಧಾರದ ಮೇಲೆ ಮೈಸೂರಿನ ಒಬ್ಬ ಯುವತಿ, ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಒಂದು ಕಾರು ಹಾಗೂ ಏಳು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಭದ್ರಾವತಿಯ ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸ ಮಾಡುವ ಯುವಕ ಬಸ್ ನಲ್ಲಿ ಪ್ರಯಾಣಿಸುವಾಗ ಯುವತಿಯೊಬ್ಬಳು ಪರಿಚಯವಾಗಿದ್ದಳು. ಈಕೆ ಪರಿಚಯವನ್ನು ಮುಂದುವರಿಸಿ, ವಾಟ್ಸಾಪ್ ನಲ್ಲಿ ಚಾಟಿಂಗ್ ಆರಂಭಿಸಿ ವೀಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ನಗ್ನ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಯುವಕನಿಗೆ ಬ್ಲ್ಯಾಕ್ ಮೇಲ್
ರೆಕಾರ್ಡ್ ಮಾಡಿದ್ದ ವೀಡಿಯೋವನ್ನು ಇಟ್ಟುಕೊಂಡು ಭದ್ರಾವತಿ ಯುವಕನಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ₹20 ಲಕ್ಷ ಬೇಡಿಕೆಯಿಟ್ಟು, ₹1 ಲಕ್ಷ ಪಡೆಯಲಾಗಿತ್ತು. ಯುವಕನನ್ನು ಬಲವಂತವಾಗಿ ಮೈಸೂರಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ₹25 ಲಕ್ಷ ಸಾಲ ಪಡೆದುಕೊಂಡಿರುವುದಾಗಿ ಬರೆಸಿಕೊಂಡು, ಸಹಿ ಹಾಕಿಸಿಕೊಳ್ಳಲಾಗಿತ್ತು. ಯುವಕ ಅಲ್ಲಿಂದ ತಪ್ಪಿಸಿಕೊಂಡು ಬಂದು ದೂರು ನೀಡಿದ್ದಾನೆ.
(ಸೂಚನೆ: ಗೌಪ್ಯತೆ ಕಾರಣಕ್ಕೆ ನೊಂದ ಯುವಕ ಹೆಸರನ್ನು ಬರೆಯಲಾಗಿಲ್ಲ. ಯಾವುದೇ ಅಪರಿಚಿತರ ಜೊತೆ ಅನ್ ಲೈನ್ ನಲ್ಲಿ ಚಾಟಿಂಗ್, ವಿಡಿಯೋ ಕರೆ ಮಾಡುವ ಮುನ್ನ ಹುಷಾರ್. ನೀವು ಮೋಸ ಹೋಗಬಹುದು. ಹನಿಟ್ರ್ಯಾಪ್, ಸೆಕ್ಸ್ ಟಾರ್ಷನ್ ಗೆ ಗುರಿಯಾಗಬಹುದು.)