Railway Police | ಭದ್ರಾವತಿಯಿಂದ ರೈಲಿನಲ್ಲಿ ಹೊರಟಿದ್ದ ಮಹಿಳೆಗೆ ಕಾದಿತ್ತು ಶಾಕ್, ಖಾಕಿ ಕರ್ತವ್ಯ ಪ್ರಜ್ಞೆಗೆ ಸೆಲ್ಯೂಟ್

Railway police Gold

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಹಿಳೆಯೊಬ್ಬರು ಭದ್ರಾವತಿ ರೈಲು ನಿಲ್ದಾಣದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಬಿಟ್ಟು ಹೋಗಿದ್ದು, ಅವುಗಳನ್ನು ಪೊಲೀಸರು ಮರಳಿಸುವ ಮೂಲಕ ಕರ್ತವ್ಯ ಮೆರೆದಿದ್ದಾರೆ.

READ | 9 ವರ್ಷದ ಬಾಲಕಿಗೆ‌ ಕಿರುಕುಳ ನೀಡಿದ ಯುವಕನಿಗೆ 20 ವರ್ಷ ಜೈಲು, ₹2 ಲಕ್ಷ ದಂಡ

ವಾರಸುದಾರರಾದ ಸಾಗರ ತಾಲೂಕು ಹೊಸಗದ್ದೆ ಸೂರನಗದ್ದೆ ನಿವಾಸಿ ಸ್ಪೂರ್ತಿ ಬಿ.ಸಾಗರ್ ಅವರು ಭದ್ರಾವತಿಯಿಂದ ಸಾಗರಕ್ಕೆ ಮೈಸೂರು- ತಾಳಗುಪ್ಪ (ರೈಲು ಸಂಖ್ಯೆ 16206) ರೈಲಿನಿಂದ ಹೊರಟಿದ್ದಾರೆ. ಈ ವೇಳೆ, ಭದ್ರಾವತಿ ರೈಲು ನಿಲ್ದಾಣದಲ್ಲಿಯೇ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ.

Shivamogga Railwayಖಾಕಿ ಕರ್ತವ್ಯ ಪ್ರಜ್ಞಕ್ಕೆ ಮೆಚ್ಚುಗೆ
ಭದ್ರಾವತಿಯಲ್ಲಿ ರೈಲು ಹತ್ತುವಾಗ ಪ್ಲಾಟ್ ಫಾರ್ಮ್ ನಲ್ಲೇ ಒಡವೆಗಳನ್ನು ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಭದ್ರಾವತಿ ರೈಲ್ವೆ ಪೊಲೀಸ್ ಪಿ.ಜೆ.ಶ್ರೀಕಾಂತ್ ಅವರು ಒಡವೆಗಳಿದ್ದ ಬ್ಯಾಗ್‍ನ್ನು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಿದ್ದಾರೆ. ನಂತರ ಆ ಬ್ಯಾಗ್ ನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!