100 ಹಾಸಿಗೆಗಳ ಇ.ಎಸ್.ಐ. ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರಿಗೆ ವರದಾನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ : ಬಹುದಿನಗಳ ಕನಸು ಈಗ ನನಸಾಗಲಿದೆ. 100 ಹಾಸಿಗೆಗಳ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.
ಇದು ಶಿವಮೊಗ್ಗ ಮತ್ತು ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರಿನ ಲಕ್ಷಾಂತರ ಕಾರ್ಮಿಕರಿಗೆ ಇದರ ಪ್ರಯೋಜನವಾಗಲಿದೆ. ಅವರ ಅವಲಂಬಿತ ಸದಸ್ಯರಿಗೆ ಒಟ್ಟು 3 ರಿಂದ 4 ಲಕ್ಷ ಜನರಿಗೆ ಆರೋಗ್ಯ ಸೇವೆ ಸಿಗಲಿದೆ. ಈ ಹಿಂದಿನ ಅವಧಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಮಂಜೂರಾತಿ ಪಡೆದು, ಅದಕ್ಕಾಗಿ ಶಿವಮೊಗ್ಗದ ನವುಲೆಯಲ್ಲಿ 5 ಎಕರೆ ಭೂಮಿಯನ್ನು ದೊರಕಿಸಿ ಕೊಡಲಾಗಿತ್ತು.

103412145 968708976894184 760610764193821999 nಇಎಸ್‍ಐ ಆಸ್ಪತ್ರೆಯಿಂದ ಲಕ್ಷಾಂತರ ಕಾರ್ಮಿಕರು ಶಿವಮೊಗ್ಗದಲ್ಲಿಯೇ ಅತ್ಯಾಧುನಿಕ ಚಿಕಿತ್ಸೆ ಪಡೆಯುವ ಕನಸು ನನಸಾಗಲಿದೆ.
– ಬಿ.ವೈ.ರಾಘವೇಂದ್ರ, ಸಂಸದರು

ಅಂದಿನ ಕೇಂದ್ರದ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರ ಅನುಪಸ್ಥಿತಿಯಲ್ಲಿ2019ರ ಫೆಬ್ರವರಿ 3ರಂದು ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.

ಇದನ್ನೂ ಓದಿ । ಕೆಜಿಎಫ್ ಚಾಪ್ಟರ್ 2 ಟೀಸರ್ ಗೆ ಅಭಿಮಾನಿಗಳು ಫಿದಾ

ಸಂಸದ ರಾಘವೇಂದ್ರ ಅವರು ಆಸ್ಪತ್ರೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಯಲ್ಲಿ ಆಗುತ್ತಿದ್ದ ವಿಳಂಬದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಹಾಗೂ ಚರ್ಚಿಸಿದ ಪರಿಣಾಮ ಟೆಂಡರ್‍ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಟೆಂಡರ್ ವೆಚ್ಚ, ಅಂತಿಮ ದಿನಾಂಕ: 71.27 ಕೋಟಿ ರೂಪಾಯಿ ವೆಚ್ಚದಲ್ಲಿ 100 ಹಾಸಿಗೆಗಳ ಇ.ಎಸ್.ಐ. ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಆಹ್ವಾನಿಸಲಾಗಿದೆ. ಜನವರಿ 16ರೊಳಗೆ ಟೆಂಡರ್ ಸ್ವೀಕರಿಸಲು ಕಡೆಯ ದಿನವಾಗಿದೆ. ಯಶಸ್ವಿ ಟೆಂಡರ್‍ದಾರರು 15 ತಿಂಗಳುಗಳೊಳಗೆ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮುಗಿಸುವ ನಿಬಂಧನೆ ವಿಧಿಸಿದ್ದಾರೆ.

error: Content is protected !!