Arrest | ಲಕ್ಷಾಂತರ ಮೌಲ್ಯದ ಆಭರಣಗಳನ್ನು ದೋಚಿದ್ದ ಆರೋಪಿ ಅರೆಸ್ಟ್, ಈತನ ಮೇಲಿದ್ದ ಕೇಸ್ ಗಳೆಷ್ಟು?

Sagar PS Theft case

 

 

ಸುದ್ದಿ ಕಣಜ.ಕಾಂ ಸಾಗರ
SHIVAMOGGA: ಸಾಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ವಿವಿಧ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಲು ಸಫಲರಾಗಿದ್ದಾರೆ.
ಟಿಪ್ಪುನಗರದ ತೌಸಿಫ್ ಅಲಿಯಾಸ್ ಬಾಯಿಜಾನ್(25) ಎಂಬಾತನನ್ನು ಬಂಧಿಸಲಾಗಿದೆ. ಕರ್ಕಿಕೊಪ್ಪದ ಗಗನ್, ಗೀಜಗಾರು ನಿವಾಸಿ ಶ್ರೀಮತಿ, ತೊರಗೋಡು ಶಿರುವಾಳ ರಾಮಚಂದ್ರ, ಬಳಸಗೋಡು ನಿವಾಸಿ ರೇಣುಕಮ್ಮ, ಗೋಪಾಲಗೌಡ ಬಡಾವಣೆ ನಿವಾಸಿ ಸಂತೋಷ್, ರಂಗನಾಥ, ಕಂಬಳಿಕೊಪ್ಪದ ಮಧು ಮತ್ತು ಬೋಳನಕಟ್ಟೆಯ ತೀರ್ಥ ಎಂಬುವವರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿ ಪೊಲೀಸರು ಕ್ರಮಕೈಗೊಂಡಿದ್ದರು.

READ | ಬೈಕ್‌ ಥೆಫ್ಟ್ ಗ್ಯಾಂಗ್ ಅರೆಸ್ಟ್, ಬರೋಬ್ಬರಿ‌ ₹5.20 ಲಕ್ಷ ಮೌಲ್ಯದ ಬೈಕ್ ಗಳು ಸೀಜ್

ಏನೆಲ್ಲ ವಶಕ್ಕೆ ಪಡೆಯಾಗಿದೆ?
ಸಾಗರ ಗ್ರಾಮಾಂತರ ಠಾಣೆಯ 4, ಸಾಗರ ಟೌನ್ ಠಾಣೆಯ 3 ಮತ್ತು ಆನಂದಪುರ ಠಾಣೆಯ 1 ಪ್ರಕರಣ ಸೇರಿ ಒಟ್ಟು 8 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು 5.70 ಲಕ್ಷ ರೂ. ಮೌಲ್ಯದ 100 ಗ್ರಾಂ ತೂಕದ ಬಂಗಾರದ ಆಭರಣ ಮತ್ತು ಅಂದಾಜು 62,400 ರೂ. ಮೌಲ್ಯದ 1 ಕೆ.ಜಿ ಬೆಳ್ಳಿ ಆಭರಣಗಳು ಸೇರಿ ಒಟ್ಟು 6,32,400 ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Crime logoಪ್ರಕರಣ ಬೇಧಿಸಿದ ತಂಡಕ್ಕೆ ಎಸ್.ಪಿ. ಮೆಚ್ಚುಗೆ
ಸಾಗರ ಗ್ರಾಮಾಂತರ ಠಾಣೆ, ಸಾಗರ ಪೇಟೆ ಠಾಣೆ ಮತ್ತು ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಲವು ಮನೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳಲ್ಲಿ ಕಳುವಾದ ಸಾಮಗ್ರಿ ಮತ್ತು ಆರೋಪಿಗಳ ಪತ್ತೆಗಾಗಿ ಎಸ್.ಪಿ. ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶದಲ್ಲಿ ಸಾಗರ ಉಪ ವಿಭಾಗದ ಡಿವೈಎಸ್.ಪಿ ಗೋಪಾಲಕೃಷ್ಣ ಟಿ.ನಾಯಕ್ ಮೇಲ್ವಿಚಾರಣೆಯಲ್ಲಿ ಸಾಗರ ಗ್ರಾಮಾಂತರ ಠಾಣೆ ಪಿಐ ಮಹಾಬಲೇಶ್ವರ್, ಸಾಗರ ಟೌನ್ ಠಾಣೆ ಪಿ.ಎಸ್.ಐ. ಸುಜಾತ, ಆನಂದಪುರ ಠಾಣೆ ಪಿ.ಎಸ್.ಐ ಯುವರಾಜ್ ನೇತೃತ್ವದಲ್ಲಿ ಸಾಗರ ಗ್ರಾಮಾಂತರ ಠಾಣೆಯ ಸಿಬ್ಬಂದಿ ಸನಾವುಲ್ಲಾ, ಶೇಖ್ ಫೈರೋಜ್ ಅಹಮದ್, ರವಿಕುಮಾರ್ ಅವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಎಸ್.ಪಿ. ಪ್ರಶಂಸಿಸಿದ್ದಾರೆ.

error: Content is protected !!