Crime news | ಬೀ‌ ಬೀರನಹಳ್ಳಿ ಮನೆಗೆ ನುಗ್ಗಿ ದರೋಡೆ ಮಾಡಿದ‌ ಇಬ್ಬರ ಬಂಧನ

Crime news

 

 

ಸುದ್ದಿ ಕಣಜ.ಕಾಂ ಹೊಳೆಹೊನ್ನೂರು
HOLEHONNURU: ಬೀ ಬೀರನಹಳ್ಳಿ ಗ್ರಾಮದಲ್ಲಿ ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಭದ್ರಾವತಿಯ ಹಳೇ ಭಂಡಾರಹಳ್ಳಿ ಗ್ರಾಮದ ಪಿ.ದರ್ಶನ್ ಅಲಿಯಾಸ್ ದರ್ಶಿ(22), ವಿಜಯ ಅಲಿಯಾಸ್ ವಿಜಿ(23) ಎಂಬುವವರನ್ನು ಬಂಧಿಸಲಾಗಿದೆ. ‌ಆರೋಪಿಗಳಿಂದ ₹15 ಸಾವಿರ ರೂ. ಮೌಲ್ಯದ 3 ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ.

Crime logo

READ |  ಮಹಿಳೆಯರೇ ಎಚ್ಚರ, ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳರ ಗ್ಯಾಂಗ್ ಆ್ಯಕ್ಟಿವ್, ಒಂದೇ‌ ದಿನ ಮೂರು ಕಡೆ ಸರಗಳವು

ಮನೆಗೆ ನುಗ್ಗಿ ದರೋಡೆ
ಡಿ.11ರಂದು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೀ ಬೀರನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮನೆಗೆ ಅಪರಿಚಿತರು ನುಗ್ಗಿ ಆತನ ಮೇಲೆ ಹಲ್ಲೆ ಮಾಡಿ ನಗದು, ಬಂಗಾರದ ಆಭರಣ ಹಾಗೂ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿರುತ್ತರೆಂದು ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಎಸ್.ಪಿ ಜಿ. ಕೆ. ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಭದ್ರಾವತಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ನಾಗರಾಜ್ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಠಾಣಾ ಪೊಲೀಸ್ ನಿರೀಕ್ಷಕರಾದ ಆರ್.ಎಲ್. ಲಕ್ಷ್ಮೀಪತಿ ಅವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಚಂದ್ರಶೇಖರ್, ರಮೇಶ್, ಸಿಬ್ಬಂದಿ ಲಿಂಗೇಗೌಡ, ಮಂಜುನಾಥ, ಕುಮಾರ, ಪ್ರಸನ್ನ, ವಿಶ್ವನಾಥ, ಚಂದ್ರಶೇಖರ್, ಪ್ರಮೋದ ಅವರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ತನಿಖಾ ತಂಡದ ಉತ್ತಮ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

Adoption Process | ಮಕ್ಕಳಿಲ್ಲವೇ, ಚಿಂತೆ ಬೇಡ, ಇಲ್ಲಿದೆ ಪೋಷಕರ ಮಡಿಲು ತುಂಬುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ

error: Content is protected !!