BJP Protest | ಕರಸೇವಕನ ಬಂಧನಕ್ಕೆ ಸಿಡಿದೆದ್ದ ಬಿಜೆಪಿ, ಶಿವಮೊಗ್ಗದಲ್ಲಿ ಎಸ್.ಪಿ. ಕಚೇರಿಗೆ ಮುತ್ತಿಗೆ

BJP Prootest

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಎಸ್.ಪಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಲಾಯಿತು.
ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ‘ನಾವು ಕರ ಸೇವಕರು, ನಮ್ಮನ್ನು ಬಂಧಿಸಿ’ ಎಂದು ಘೋಷಣೆ ಕೂಗಿದರು.

ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಹಿಂದೂ ವಿರೋಧಿ ನೀತಿಯಾಗಿದೆ. ಕಾಂಗ್ರೆಸ್ ಸರ್ಕಾರ ತೊಘಲಕ್ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ಸಿಗರು ಬಾಬರ್ ಸಂಸ್ಕೃತಿಯವರು. ಇದನ್ನು ನಾಶ ಮಾಡಲೆಂದೆ ನಾವು ಬದುಕಿದ್ದೇವೆ. ಇವರಿಗೆ ತಾಕತ್ತಿದ್ದರೆ ಇದನ್ನು ತಡೆಯಬೇಕು. ಆಯೋಧ್ಯೆಯಲ್ಲಿ ಭವ್ಯವಾಗಿ ರಾಮಮಂದಿರ ಕಟ್ಟಲಾಗಿದೆ ಎಂಬ ಹೊಟ್ಟೆ ಉರಿಯಿಂದ ಈ ರೀತಿ ವರ್ತಿಸುತ್ತಿದ್ದಾರೆ. ಆದರೆ ಆಯೋಧ್ಯೆಗೆ ಹೋಗುವವರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆಯೋಧ್ಯೆ ಈ ದೇಶದ ಆಸ್ಮಿತೆಯಾಗಿದೆ.
ಎಸ್.ಎನ್.ಚನ್ನಬಸಪ್ಪ, ಶಾಸಕ

ಪಾದಯಾತ್ರೆ ಮೂಲಕ ಪ್ರತಿಭಟನೆ
ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಖಾಸಗಿ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಲಾಯಿತು.
ಘೋಷಣೆ ಕೂಗುತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಿದರು. ಪೊಲೀಸರ ತಡೆಯ ನಡುವೆಯೂ ಅವರು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಮಾಜಿ ಸಚಿವ ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಭಾನುಪ್ರಕಾಶ್ ಮತ್ತಿತರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು.
ಶಾಸಕ ಎಸ್.ರುದ್ರೇಗೌಡ, ಪ್ರಮುಖರಾದ ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಿವರಾಜ್, ಗಿರೀಶ್ ಪಟೇಲ್, ಹರಿಕೃಷ್ಣ, ಜಗದೀಶ್, ಎಸ್.ದತ್ತಾತ್ರಿ, ಈ.ವಿಶ್ವಾಸ್, ಬಳ್ಳಕೆರೆ ಸಂತೋಷ್, ವಿನ್ಸೆಂಟ್, ಮಾಲತೇಶ್, ಸುರೇಖಾ, ಸೀತಾಲಕ್ಷ್ಮೀ, ರಶ್ಮಿ, ಅ.ಮಾ.ಪ್ರಕಾಶ್, ಆರತಿ ಇದ್ದರು.

READ | ವರದಿಗಾರರಾಗಬೇಕೆ? ಶಿವಮೊಗ್ಗದಲ್ಲಿದೆ ಸುವರ್ಣ ಅವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

error: Content is protected !!