Swadeshi Mela | ಶಿವಮೊಗ್ಗದಲ್ಲಿ ಬೃಹತ್ ಸ್ವದೇಶಿ ಮೇಳಕ್ಕೆ ಬುಕ್ಕಿಂಗ್ ಆರಂಭ

Swadeshi mela

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಫ್ರೀಡಂ‌ ಪಾರ್ಕ್’ನಲ್ಲಿ ಜಿಲ್ಲಾ ಸ್ವದೇಶಿ ಜಾಗರಣ ಮಂಚ್ (Swadeshi Jagran Manch) ವತಿಯಿಂದ ಡಿಸೆಂಬರ್ 6 ರಿಂದ 10ರ ವರೆಗೆ ‘ಬೃಹತ್ ಸ್ವದೇಶಿ ಮೇಳ (Swadeshi Mela) ಆಯೋಜಿಸಲಾಗಿದೆ. ಮೇಳದಲ್ಲಿ ಮಳಿಗೆ ಹಾಕಲು ಬುಕ್ಕಿಂಗ್ ಆರಂಭವಾಗಿದೆ.

ಮೇಳದ ಬಗ್ಗೆ ತಿಳಿಯಲೇಬೇಕಾದ ವಿಚಾರಗಳಿವು

  1. ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದು ಮತ್ತು ದೇಶೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ 250ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಲಿವೆ.
  2. 1 ಲಕ್ಷಕ್ಕೂ ಹೆಚ್ಚು ವಿವಿಧ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
  3. ವಿವಿಧ ರೀತಿಯ ತರಬೇತಿಗಳು, ದೇಶೀಯ ಕ್ರೀಡೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
  4. ಈ ಮೇಳದಲ್ಲಿ ಕೇಂದ್ರದ ಮಂತ್ರಿಗಳು, ರಾಜ್ಯದ ಪ್ರಮುಖ ಸ್ವಾಮೀಜಿಗಳು ಹಾಗೂ ರಾಜ್ಯದ ಮತ್ತು ಜಿಲ್ಲೆಯ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಆಸಕ್ತರು ಕರೆ ಮಾಡಿ
ಮೇಳದಲ್ಲಿ ಮಳಿಗೆ ಹಾಕಲು ಆಸಕ್ತರು ಅರವಿಂದ್ ದೂರವಾಣಿ ಸಂಖ್ಯೆ- 9148524854 ಯನ್ನು ಸಂಪರ್ಕಿಸುವಂತೆ ಸ್ವದೇಶಿ ಮೇಳದ ಸಂಯೋಜಕ ಡಾ ಧನಂಜಯ ಸರ್ಜಿ (Dr.Dhananjay sarji), ಸಂಚಾಲಕ ಡಿ.ಎಸ್.ಅರುಣ್(DS Arun), ಸಂಘಟಕ ಹರ್ಷ ಬಿ. ಕಾಮತ್ (Harsha B.Kamat) ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

 

error: Content is protected !!