
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ನ.26ರಿಂದ 28ರವರೆಗೆ 72 ಗಂಟೆಗಳ ಮಹಾಧರಣಿ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ (H.R. Basavarajappa) ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಹಿಮೆಟ್ಟಿಸಲು ಮತ್ತು ರಾಜ್ಯ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದತಿ ಹಾಗೂ ಪರ್ಯಾಯ ನೀತಿ ರೂಪಿಸುವಂತೆ ಒತ್ತಾಯಿಸಿ ಮಹಾಧರಣಿ ಮಾಡಲಾಗುತ್ತಿದೆ ಎಂದರು.
READ | ಎಚ್.ಎಸ್.ಆರ್.ಪಿಗೆ ಅರ್ಜಿ ಸಲ್ಲಿಕೆ ಹೇಗೆ? ಅತೀ ಸುರಕ್ಷಿತ ನೋಂದಣಿ ಫಲಕದ ಪ್ರಯೋಜನವೇನು?
ರಾಜ್ಯ ಸಂಪೂರ್ಣ ಬರಗಾಲವೆಂದು ಘೋಷಿತವಾಗಿದ್ದರಿಂದ ತತಕ್ಷಣದಿಂದ ರೈತರಿಗೆ ಎಕರೆಗೆ ₹20 ಸಾವಿರ ಪರಿಹಾರ ಘೋಷಿಸಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಬರಗಾಲ ಸಂದರ್ಭಲ್ಲಿ ಪಹಣಿ, ಮ್ಯುಟೇಷನ್, ಹದ್ದುಬಸ್ತು, ವರಮಾನ ಪ್ರಮಾಣ ಪತ್ರ, ಜಾತಿ ತಕ್ಷಣವೇ ಕಡಿಮೆ ಮಾಡಬೇಕು. ಪ್ರಮಾಣಪತ್ರ ಇತರೆ ಪ್ರಮಾಣ ಪತ್ರಗಳಿಗೆ ಹಿಂದಿಗಿಂತ 3ರಷ್ಟು ದುಬಾರಿ ಶುಲ್ಕವನ್ನು ವಿಧಿಸಿರುವುದನ್ನು ಹಿಂದಡೆಯಬೇಕು. ಆಹಾರ, ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ವಿಸ್ತರಿಸಿ, ₹600 ಕೂಲಿ ನೀಡಬೇಕು.
– ಎಚ್.ಆರ್.ಬಸವರಾಜಪ್ಪ, ರಾಜ್ಯ ರೈತ ಸಂಘದ ಅಧ್ಯಕ್ಷ
ರೈತ ಸಂಘದ ಮುಖಂಡರ ಆರೋಪಗಳೇನು?
- 2014ರಿಂದಲೂ ದೇಶದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಕ್ರಮಣಕಾರಿಯಾಗಿ ರೂಪಿಸುತ್ತಿರುವ ಕಾರ್ಪೊರೇಟ್ ಬಂಡವಾಳಪರ ನವ ಉದಾರವಾದಿ ನೀತಿಗಳು ದೇಶದ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡಿವೆ. ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ, ಸಾಮಾನ್ಯ ಜನತೆಯ ಮೇಲೆ ಜಿ.ಎಸ್.ಟಿ ಹೊರೆ ವಿಧಿಸಿದೆ. ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸೇವೆಗಳ ಜನತೆ ತತ್ತರಿಸುವಂತಾಗಿದೆ.
- ತಾನೇ ರೂಪಿಸಿದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹೋರಾಟದ ಬಳಿಕ ವಾಪಸ್ ಪಡೆಯಿತು. ಆದರೂ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿ ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಈ ಧೋರಣೆಗಳು ರೈತಾಪಿ ವರ್ಗವನ್ನು ಸಾಲದ ಸುಳಿಗೆ ಸಿಲುಕಿಸಿ ಕೃಷಿಯಿಂದ ಹೊರ ದೂಡಲಾಗುತ್ತಿದೆ. ಕೃಷಿ ಆರ್ಥಿಕತೆ ಬಿಕ್ಕಟ್ಟಿನಲ್ಲಿ ಸಾಗುತ್ತಿದೆ.
- ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡುವುದಿಲ್ಲವೆಂದು ಹೇಳಿ ಮಾತಿಗೆ ತಪ್ಪಿದೆ. ರಾಜ್ಯದ 214 ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಿದೆ. ಆದರೆ ರೈತರಿಗೆ ಬರಗಾಲ ಪರಿಹಾರ ಧನ ವಿತರಿಸುವ ಪ್ರಕ್ರಿಯೆ ಇದುವರೆಗೂ ಪ್ರಾರಂಭಿಸಿಲ್ಲ. ಇತ್ತಿಚೆಗೆ ರೈತರ ಐಪಿ ಸೆಟ್ಗಳಿಗೆ ಮೂಲಸೌಕರ್ಯವನ್ನು ರೈತರೇ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಇದರಿಂದ ರೈತರಿಗೆ ಬರೆ ಎಳೆದಂತಾಗಿದೆ.
ರಾಜ್ಯ ಸರ್ಕಾರ ನಿರ್ಣಯ ಮಾಡಲಿ
ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ತಿಳಿಸಿದ ಪ್ರಕಾರ ನಡೆದುಕೊಳ್ಳಬೇಕು. ಬೇರೆ ರಾಜ್ಯಗಳು ಈ ಬಗ್ಗೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿವೆ. ಅದೇ ರೀತಿ ಬಿ.ಜೆ.ಪಿಯೇತರ ಸರ್ಕಾರಗಳು ವಿದ್ಯುತ್ಚಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರವು ನಿರ್ಣಯ ಮಾಡಿ ಕಳುಹಿಸಬೇಕು.
ಮುಖಂಡರಾದ ಕಸೆಟ್ಟಿ ರುದ್ರೇಶ, ಕೆ. ರಾಘವೇಂದ್ರ, ಹಿಟ್ಟೂರು ರಾಜು, ಸಿ. ಚಂದ್ರಪ್ಪ, ಎಂ.ಡಿ.ನಾಗರಾಜ್ ಉಪಸ್ಥಿತರಿದ್ದರು.