ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಂಚಾರ ನಿಯಮ ಉಲ್ಲಂಘಿಸಿದ ನಾಲ್ಕು ಬೈಕ್ ಗಳು ಹಾಗೂ ಒಂದು ಆಟೋ ವಿರುದ್ಧ 42 ಪ್ರಕರಣ ದಾಖಲಿಸಿದ್ದು, ಒಟ್ಟು 45,500 ರೂ. ದಂಡ ವಿಧಿಸಿದ್ದು, ಅದನ್ನು ವಾಹನ ಮಾಲೀಕರಿಂದ ವಸೂಲಿ ಮಾಡಲಾಯಿತು.
READ | ಶಿವಮೊಗ್ಗದ ಎರಡು ಕಡೆ ಪ್ರೀಪೇಯ್ಡ್ ಆಟೋ ನಿಲ್ದಾಣ, ರೈಲು ನಿಲ್ದಾಣದಿಂದ ಬಸ್ ಯಾವಾಗಿಂದ ಆರಂಭ?
ಸ್ಕೂಟಿ ವಿರುದ್ಧ 12 ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದ್ದು, 13,500 ರೂ. ದಂಡ ಸಂಗ್ರಹಿಸಲಾಗಿದೆ. ಇನ್ನೊಂದು ಬೈಕ್ ವಿರುದ್ಧ 6 ಪ್ರಕರಣಗಳಲ್ಲಿ 6 ಸಾವಿರ ರೂ., ಮತ್ತೊಂದು ಬೈಕ್ ವಿರುದ್ಧ 5 ಪ್ರಕರಣಗಳಲ್ಲಿ 5 ಸಾವಿರ ರೂ., ಪ್ಯಾಶನ್ ಬೈಕ್ ವೊಂದರ ವಿರುದ್ಧ 13 ಪ್ರಕರಣಗಳಲ್ಲಿ 13 ಸಾವಿರ ರೂ. ದಂಡ ಹಾಗೂ ಆಟೋ ವಿರುದ್ಧ 6 ಪ್ರಕರಣಗಳಲ್ಲಿ 9 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ.