ಪಾಲಿಕೆಯಿಂದ ಗಾಂಧಿ ಬಜಾರ್‍ನಲ್ಲಿ ರೇಡ್, ಕಾರಣವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಗಾಂಧಿ ಬಜಾರ್‍ನಲ್ಲಿಯ ಅಂಗಡಿಯೊಂದರ ಮೇಲೆ ಅಧಿಕಾರಿಗಳು ಬುಧವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ. ಅಂಗಡಿಯಲ್ಲಿ ದಾಸ್ತಾನು ಮಾಡಲಾಗಿದ್ದ 1 ಟನ್ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ ।  ಕಾರಾಗೃಹ ಬಂಧಿಗಳೊಡನೆ ವಿಡಿಯೋ ಕಾಲ್‍ಗೆ ಅವಕಾಶ, ಸೆಂಟ್ರಲ್ ಜೈಲಿನಿಂದ ವಿನೂತನ ಹೆಜ್ಜೆ

ಅಂಗಡಿಯ ಹೊರಗಡೆ ಟ್ರೆಡರ್ಸ್ ಎಂದು ಬೋರ್ಡ್ ಹಾಕಿಕೊಂಡು ಒಳಗಡೆ ಪ್ಲಾಸ್ಟಿಕ್ ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನು ಗಮನಿಸಿದ ಅಧಿಕಾರಿಗಳು ದಾಳಿ ನಡೆಸಿದಾಗ ಪ್ಲಾಸ್ಟಿಕ್ ಕಪ್, ಪ್ಲೇಟ್ಸ್, ಕ್ಯಾರಿಬ್ಯಾಗ್ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳು ಸಿಕ್ಕಿವೆ.

ಮತ್ತೆ ದಾಳಿ ಶುರು: ಕೋವಿಡ್‍ಗಿಂತ ಮುಂಚೆ ನಗರದ ವಿವಿಧೆಡೆಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಮೇಲೆ ಸಂಪೂರ್ಣ ನಿಬರ್ಂಧ ಹೇರಿ ಹಲವೆಡೆ ದಾಳಿ ಕೂಡ ಮಾಡಲಾಗಿತ್ತು. ಬಹುತೇಕ ಹದ್ದುಬಸ್ತಿಗೂ ಬಂದಿತ್ತು. ಬೀದಿ ಬದಿ ವ್ಯಾಪಾರಸ್ಥರ ಹೊರತು ದೊಡ್ಡ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿತ್ತು.
ಆದರೆ, ಕೊರೊನಾ ಬಂದ ನಂತರ ಪರಿಸ್ಥಿತಿ ಯಥಾಸ್ಥಿತಿಗೆ ತಲುಪಿದೆ. ಇದನ್ನು ಮನಗಂಡು ಮಹಾನಗರ ಪಾಲಿಕೆ ಅಧಿಕಾರಿಗಳು ಮಧ್ಯಾಹ್ನ ಏಕಾಏಕಿ ದಾಳಿ ನಡೆಸಿದ್ದಾರೆ.

error: Content is protected !!