Shimoga news | ನಾಳೆ ಮಾಂಸ ಮಾರಾಟ ನಿಷೇಧ | ಲಿಡ್‍ಕರ್ ಚರ್ಮದ ಉತ್ಪನ್ನಗಳ ರಿಯಾಯಿತಿ ಮಾರಾಟ | ಡಾಕ್ ಅದಾಲತ್

FATA FAT NEWS 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾರ್ಚ್ 8 ರಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

one click many news logo

READ | ಮಾ. 8, 9ರಂದು ಹರಕೆರೆ‌ ಮಾರ್ಗದಲ್ಲಿ ವಾಹನಗಳ‌ ಸಂಚಾರ ನಿಷೇಧ, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ

ರಿಯಾಯಿತಿ ದರದಲ್ಲಿ‌ ಮಾರಾಟ

SHIMOGA: ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಜಿಲ್ಲೆಯ ನೆಹರು ರಸ್ತೆ, ಬಸವ ಸದನ ಕಾಂಪ್ಲೆಕ್ಸ್ ನಲ್ಲಿ ಲಿಡ್‍ಕರ್ ಮಾರಾಟ ಮಾಳಿಗೆಯಲ್ಲಿ ಅಪ್ಪಟ ಚರ್ಮ ವಸ್ತುಗಳ ಮೇಲೆ ವಾರ್ಷಿಕ ತೀರುವಳಿ ಮಾರಾಟದ ಪ್ರಯುಕ್ತ ಮಾ.3 ರಿಂದ 27ರವರೆಗೆ ಶೇ. 10 ರಿಂದ 40 ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಲಿಡ್‍ಕರ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9480886268 ನ್ನು ಸಂಪರ್ಕಿಸುವುದು.

ಮಾ. 15 ರಂದು ಡಾಕ್ ಅದಾಲತ್

SHIMOGA: ಶಿವಮೊಗ್ಗ ಅಂಚೆ ವಿಭಾಗವು ಮಾ.15 ರಂದು ಬೆಳಗ್ಗೆ 11ಕ್ಕೆ ಅಂಚೆ ಅಧೀಕ್ಷಕರ ಕಚೇರಿ, ಕೋಟೆ ರಸ್ತೆ, ಶಿವಮೊಗ್ಗ ಅಂಚೆ ವಿಭಾಗದಲ್ಲಿ ಡಾಕ್ ಅದಾಲತ್ ಹಮ್ಮಿಕೊಂಡಿದೆ. ಸಾರ್ವಜನಿಕರು ಅಂಚೆ ಇಲಾಖೆಯ ಕುಂದುಕೊರತೆಗಳನ್ನು ಅಥವಾ ಸಲಹೆ-ಸೂಚನೆಗಳನ್ನು ಮಾ.12 ರೊಳಗಾಗಿ ಸಲ್ಲಿಸಿ, ಡಾಕ್ ಅದಾಲತ್‍ನಲ್ಲಿ ಭಾಗವಹಿಸುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

error: Content is protected !!