KS Eshwarappa | ಪುತ್ರ ಕಾಂತೇಶ್‍ಗೆ ಎಂಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮಹತ್ವದ ಸಭೆ ಕರೆದ ಈಶ್ವರಪ್ಪ

Kantesh Eshwarappa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಲೋಕಸಭೆ ಚುನಾವಣೆಯ ಬಿಸಿ ಏರುತ್ತಿರುವ ಬೆನ್ನಲ್ಲೇ ಟಿಕೆಟ್ ವಿಚಾರದಲ್ಲಿನ ಅಸಮಾಧಾನ ಶಿವಮೊಗ್ಗದಲ್ಲಿ ಮತ್ತೊಂದು ಹಂತದ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಹಾವೇರಿಯಿಂದ ಕಾಂತೇಶ್ ಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪಗೆ ಶಾಕ್ ಆಗಿದೆ. ಹಾವೇರಿಗೆ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಿದ್ದರಿಂದ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಿದೆ. ಇದರಿಂದ ಅವರು ಕೆಂಡಾಮಂಡಲಗೊಂಡಿದ್ದಾರೆ.

VIDEO REPORT

READ | ಟಿಕೆಟ್ ಘೋಷಣೆ ಬೆನ್ನಲ್ಲೇ ಈಶ್ವರಪ್ಪ ತುರ್ತು ಮಾಧ್ಯಮಗೋಷ್ಠಿ, ಯಡಿಯೂರಪ್ಪ ವಿರುದ್ಧ ಮಾಡಿದ 5 ನೇರ ಆರೋಪಗಳೇನು?

15ರಂದು ಮಹತ್ವದ ಸಭೆ
ರಾಷ್ಟ್ರೀಯ ಭಕ್ತರ ಬಳಗವು ನಗರದ ಬಂಜಾರ ಭವನದಲ್ಲಿ ಸಂಜೆ 5 ಗಂಟೆಗೆ ಅಭಿಪ್ರಾಯ ಸಂಗ್ರಹ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಹಿತೈಷಿಗಳು, ಅಭಿಮಾನಿಗಳು ನೀಡುವ ಸಲಹೆಗಳನ್ನು ಪಡೆದ ಬಳಿಕ ಮುಂದಿನ ಹೆಜ್ಜೆ ಇಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಈಶ್ವರಪ್ಪ ಅವರ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿಯ ಮುಖಂಡರು ಈಶ್ವರಪ್ಪ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

error: Content is protected !!