Lokasabha election | ಶಿವಮೊಗ್ಗದಲ್ಲಿ ಐವರು ಚುನಾವಣಾ ಐಕಾನ್‍ಗಳ ಆಯ್ಕೆ, ಯಾರೆಲ್ಲ ಇದ್ದಾರೆ?

Shivamogga Loka sabha constituency Map

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಸ್ವೀಪ್ ಸಮಿತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಮತದಾನ ಜಾಗೃತಿ ಮೂಡಿಸಲು ಆಯ್ಕೆಗೊಂಡಿರುವ ಚುನಾವಣಾ ಐಕಾನ್‍ಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಹಾಗೂ ಎಸ್‍ಪಿ ಮಿಥುನ್ ಕುಮಾರ್‍ ಅವರು ಶುಕ್ರವಾರ ಜಿಲ್ಲಾಡಳಿತ ಕಚೇರಿಯಲ್ಲಿ ಅಭಿನಂದನಾ ಪತ್ರ ವಿತರಣೆ ಮಾಡಿದರು. ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.

one click many news logo
ಚುನಾವಣಾ ಐಕಾನ್ ವಿವರ

  1. ದೀಕ್ಷಿತ್– ಪಿಡಬ್ಲ್ಯೂಡಿ(ಅಂಧ) ಮತದಾರ, ಶೈಕ್ಷಣಿಕ ವರ್ಷದಲ್ಲಿ ಕುವೆಂಪು ವಿಶ್ವ ವಿದ್ಯಾಲಯ ದ ಇಂಗ್ಲಿಷ್ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದಿರುವುದಕ್ಕೆ ಸ್ವರ್ಣ ಪದಕ ಪಡೆದಿರುತ್ತಾರೆ. ಪ್ರಸ್ತುತ ಪಿಎಚ್‍ಡಿ ವ್ಯಾಸಂಗ ಮಾಡುತ್ತಿರುತ್ತಾರೆ.
  2. ಜ್ಯೋತಿ– ಅಂತರ್ ರಾಷ್ಟ್ರೀಯ ಕ್ರೀಡಾಪಟು (ಥ್ರೋಬಾಲ್) ಒಲಂಪಿಯಾಡ್. 2022ರಲ್ಲಿ ರಾಜ್ಯ ಪ್ರಶಸ್ತಿ, 2024 ರಲ್ಲಿ ಕ್ರೀಡಾ ರತ್ನ ಪ್ರಶಸ್ತಿ, 2024 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಕಿದೆ.
  3. ಡಾ.ಕೆ.ಎಸ್.ಶುಬ್ರತಾ- ಮನೋವೈದ್ಯರು ಮತ್ತು ಲೇಖಕರು, ಇಂಗ್ಲೆಂಡ್ ನ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ ನೀಡುವ ಓವರ್‍ಸೀಸ್ ಪ್ರಶಸ್ತಿ ಪಡೆದಿರುತ್ತಾರೆ.
  4. ನಿವೇದನ್ ನೆಂಪೆ– ಯುವ ಉದ್ಯಮಿ, ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್ 2015, ಇನ್ನೋವೇಟಿವ್ ಪ್ರಾಡಕ್ಟ್ ಆಫ್ ದ ಇಯರ್ 2015. ಚೇಂಬರ್ ಆಫ್ ಕಾಮರ್ಸ್ ಬಿಜಿನೆಸ್ ಅವಾರ್ಡ್ 2015 ಪಡೆದಿರುತ್ತಾರೆ.
  5. ನಾಗರಾಜ್ ತೋಂಬ್ರಿ- ಜೋಗಿ ಜಾನಪದ ಕಲಾವಿದರು, ಹೃದಯವಾಹಿ ದಶಮಾನೋತ್ಸವ ಪ್ರಶಸ್ತಿ- ಕೊಚ್ಚಿನ್. ಕರಾವಳಿ ರಾಜ್ಯಮಟ್ಟದ ಪ್ರಶಸ್ತಿ ಕಾಸರಗೋಡು –ಕೇರಳ. ಕಾಯಕಶ್ರೀ ಪ್ರಶಸ್ತಿ ವೀರಶೈವ ಸಂಸ್ಥೆ ಬೆಂಗಳೂರು ಪಡೆದಿರುತ್ತಾರೆ.

MP Election | ಶಿವಮೊಗ್ಗದಲ್ಲಿ ಮತ್ತೆ ಮಾಜಿ ಸಿಎಂ ಫ್ಯಾಮಿಲಿಗಳ ನಡುವೆ ಪಾಲಿಟಿಕ್ಸ್, ತಿಳಿಯಲೇಬೇಕಾದ ಅಂಶಗಳಿವು

error: Content is protected !!