ಗ್ರೌಂಡ್ ರಿಪೋರ್ಟ್ | ಹುಣಸೋಡು ಘಟನಾ ಸ್ಥಳಕ್ಕೆ ಯಾರೂ ಹೋಗದಂತೆ ಹೈ ಸೆಕ್ಯೂರಿಟಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಡೈನಮೆಟ್ ಬ್ಲಾಸ್ಟ್ ಆದ ಕಲ್ಲು ಕ್ವಾರಿಯ ಸುತ್ತ ಪೊಲೀಸ್ ಸರ್ಪಗಾವಲು ಇದೆ. ಯಾರನ್ನೂ ಒಳಗೆ ಪ್ರವೇಶಿಸಲು ಬಿಡುತ್ತಿಲ್ಲ.

IMG 20210122 101027
ಸ್ಫೋಟಗೊಂಡ ಜಾಗದಲ್ಲಿ ಇನ್ನೂ ಜೀವಂತ ಜಿಲೆಟಿನ್ ಕಡ್ಡಿಗಳಿದ್ದಲ್ಲಿ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ದಳ ಹಾಗೂ ಶಿವಮೊಗ್ಗೆದ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈಗಲೂ ಪರಿಶೀಲನೆ ನಡೆಯುತ್ತಿದೆ.
ಐದು ಶವ ಪತ್ತೆ: ಐದು ಶವಗಳು ಪತ್ತೆಯಾಗಿದ್ದು ಅದರಲ್ಲಿ ಎರಡನ್ನು ಮರಣೋತ್ತರ ಪರೀಕ್ಷೆಗೋಸ್ಕರ ತೆಗೆದುಕೊಂಡು ಬರಲಾಗಿದೆ. ಆದರೆ, ಇನ್ನುಳಿದ ಶವಗಳು ಅಲ್ಲಿಯೇ ಇವೆ.

IMG 20210122 111220
ಸ್ಥಳದಲ್ಲಿಯೇ ಅಗ್ನಿಶಾಮಕ ದಳ, ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಬಸವನಗಂಗೂರು ಪ್ರವೇಶ ದ್ವಾರದಿಂದಲೇ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

IMG 20210122 113631
ಸ್ಥಳಕ್ಕೆ ಸಂಸದ ಬಿವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಆಯನೂರು ಮಂಜುನಾಥ್, ಬಿ.ಕೆ.ಸಂಗಮೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಸೇರಿದಂತೆ ಜನಪ್ರತಿನಿಧಿಗಳು ಭೇಟಿ ನೀಡಿದರು.
ಡಿಸಿ ಕೆ.ಬಿ.ಶಿವಕುಮಾರ್, ಎಸ್.ಪಿ ಕೆ.ಎಂ.ಶಿವರಾಜು ಸ್ಥಳದಲ್ಲಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಅವರು ಸ್ಥಳಕ್ಕೆ ಆಗಮಿಸಲಿದ್ದಾರೆ.

error: Content is protected !!