Crime news | ಬೈಕ್ ಸವಾರ ಸಾವು, ಮನೆ ಸುಟ್ಟು ಭಸ್ಮ

Crime news

 

 

ಸುದ್ದಿ‌ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತಾಲೂಕು ದೇವಂಗಿ ಗ್ರಾಮದಲ್ಲಿ ರೈತ ಜಿ.ಎಸ್.ಗುರುಮೂರ್ತಿ ಮನೆಗೆ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟ ಭಸ್ಮವಾಗಿದೆ.
ಅಡಿಕೆ, ಕಾಳು ಮೆಣಸು, ಭತ್ತದ ಮೂಟೆ, ಒಂದು ಬೈಕ್, ಜಾನುವಾರು ಕೊಟ್ಟಿಗೆ, ಅಡಿಕೆ ಸಂಸ್ಕರಣೆ ಯಂತ್ರ, ಮನೆ ಬಳಿ‌ ಇದ್ದ ಒಂದು ಎಕರೆ ಅಡಿಕೆ ತೋಟಕ್ಕೂ ಹಾನಿಯಾಗಿದೆ.
ಸುಮಾರು ₹60 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೆಂಕಿ ತಗುಲಿದ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ತೀರ್ಥಹಳ್ಳಿ, ಕೊಪ್ಪ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದರು. ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದರು.

READ | ಶಿವಮೊಗ್ಗದ ಸಾರ್ವಜನಿಕ ಸ್ಥಳದಲ್ಲೇ ನಡೀತು ಡಬಲ್ ಮರ್ಡರ್, ಎಸ್.ಪಿ ಹೇಳಿದ್ದೇನು?

ಬೈಕ್ ಸವಾರ ಸಾವು

Accident

HOLEHONNUR: ಪುರಲೆ ಕೆರೆ ಬಳಿ ಸರಕು ಸಾಗಣೆ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಬೀರನಹಳ್ಳಿ ಗ್ರಾಮದ ನಿವಾಸಿ ಕೃಷ್ಣ (34) ಮೃತಪಟ್ಟಿದ್ದಾರೆ.
ಕೃಷ್ಣ ಶಿವಮೊಗ್ಗದಿಂದ ಹೊಳೆಹೊನ್ನೂರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಎದುರುಗಡೆಯಿಂದ ಬಂದ ವಾಹನ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!