ಬಂಪರ್ ಬಹುಮಾನಕ್ಕೆ ಮುಗಿಬಿದ್ದ 400 ತಂಡ, ತಲೆಕೆಟ್ಟು ಕ್ರಿಕೆಟ್ ಪಂದ್ಯಾವಳಿಯೇ ರದ್ದು!

 

 

ಸುದ್ದಿ ಕಣಜ.ಕಾಂ
ಚಿಕ್ಕಮಗಳೂರು: ಕ್ರಿಕೆಟ್ ಪಂದ್ಯಾವಳಿಗೆ ಹೆಚ್ಚೆಂದರೆ ಎಷ್ಟು ತಂಡಗಳು ಭಾಗವಹಿಸುವ ಇಂಗಿತ ವ್ಯಕ್ತಪಡಿಸಬಹುದು? ಇಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಬರೋಬ್ಬರಿ 400ಕ್ಕೂ ಅಧಿಕ ಕ್ರಿಕೆಟ್ ತಂಡಗಳು ಭಾಗವಹಿಸಲು ಮುಂದೆ ಬಂದಿವೆ. ಇದರಿಂದ ಬೆಸ್ತುಬಿದ್ದ ಆಯೋಜಕ ಪಂದ್ಯಾವಳಿಯನ್ನೇ ರದ್ದುಗೊಳಿಸಿದ್ದಾನೆ!

ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯಲ್ಲಿ. ಫೆಬ್ರವರಿ 9ರಂದು ಕಡಬಗೆರೆಯ ಗಾಂಧಿ ಮೈದಾನದಲ್ಲಿ ಖಾಂಡ್ಯ ಕ್ರಿಕೆಟ್ ಹಬ್ಬವನ್ನು ಆಯೋಜಿಸಲಾಗಿತ್ತು. ಅದಕ್ಕಾಗಿ, ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು. ಇದರಿಂದ ಆಕರ್ಷಿತರಾದ ರಾಜ್ಯದ ವಿವಿಧ ತಂಡಗಳವರು ಆಯೋಜಕರಿಗೆ ಕರೆ ಮಾಡಿ ನೋಂದಣಿ ಮಾಡುವಂತೆ ಕೋರಿದ್ದಾರೆ.

ಬಹುಮಾನದಲ್ಲಿ ಅಂತಹದ್ದೇನಿತ್ತು

  1. ಮೊದಲನೇ ಬಹುಮಾನ | 30 ಕೆಜಿ ತೂಕದ ಕುರಿ, 1 ಬಾಟೆಲ್ ಎಂಸಿ ವಿಸ್ಕಿ, 1 ಕೇಸ್ ಬೀಯರ್
  2. ಎರಡನೇ ಬಹುಮಾನ | 6 ನಾಟಿ ಕೋಳಿ, 1 ಬಾಟಲ್ ದುಬಾರಿ ಮದ್ಯ, 1 ಕೇಸ್ ಬೀಯರ್
  3. ಸಮಾಧಾನಕರ ಬಹುಮಾನ | ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಟೀಂಗಳಿಗೆ ಕೂಲ್ ಡ್ರಿಂಕ್ಸ್
  4. ಮ್ಯಾನ್ ಆಫ್ ದ ಸಿರೀಸ್ ಗೆ 5 ಕೆಜಿ ಈರುಳ್ಳಿ, ಬೆಸ್ಟ್ ಬ್ಯಾಟ್ಸ್ ಮನ್ ಗೆ 1 ಕೆಜಿ ಖಾರದಪುಡಿ, ಬೆಸ್ಟ್ ಬೌಲರ್ ಗೆ 2 ಲೀಟರ್ ಸನ್ ಫ್ಲವರ್ ಆಯಿಲ್.

ಆಯೋಜಕರು ಈ ಸಂಬಂಧ ಒಂದು ಹ್ಯಾಂಡ್ ಬಿಲ್ ಪ್ರಕಟಿಸಿದ್ದು, ಸುನಾಮಿ ರೀತಿಯಲ್ಲಿ ಇವರಿಗೆ ಫೋನ್ ಕರೆ ಬಂದಿವೆ. ಆಗ ಪಂದ್ಯಾವಳಿ ರದ್ದುಗೊಳಿಸುವುದಾಗಿ ಹೇಳಲಾಗಿದೆ. ಸದ್ಯಕ್ಕೆ ಪಂದ್ಯಾವಳಿ ರದ್ದುಪಡಿಸಲಾಗಿದೆ.

ನೀಡಿದ್ದ ಸೂಚನೆಗಳೇನು | ಖಾಂಡ್ಯ ಕ್ರಿಕೆಟ್ ಪ್ರಿಮಿಯರ್ ಲೀಗ್ ನಲ್ಲಿ ಆಡಿದ ಸ್ಥಳೀಯ ತಂಡಗಳೀಗೆ ಅವಾಕಾಶ ನೀಡುವುದಾಗಿ ಷರತ್ತು ವಿಧಿಸಲಾಗಿತ್ತು. ಆದರೂ ರಾಜ್ಯದ ವಿವಿಧೆಡೆಯಿಂದ ಫೋನ್ ಕರೆಗಳು ಎಗ್ಗಿಲ್ಲದೆ ಬಂದಿವೆ. ಇದರಿಂದ ಬೇಸತ್ತು ಆಯೋಜಕರು ಟೂರ್ನಿಯನ್ನೇ ಮುಂದೂಡಿದ್ದಾರೆ.

error: Content is protected !!