ಕನ್ನಡ ಕಂಪು ಸೂಸಿದ ಮೆರವಣಿಗೆ, ನುಡಿ ತೇರಿನಿಂದ ಕಳೆಗಟ್ಟಿದ ಶಿವಮೊಗ್ಗ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಮಟ್ಟದ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಭಾನುವಾರ ಬೆಳಗ್ಗೆ ಚಾಲನೆ ನೀಡಲಾಯಿತು.

ಇದನ್ನೂ ಓದಿ । ನುಡಿ ತೇರಿಗೆ ಶಿವಮೊಗ್ಗ ಸಿದ್ಧ, ನಾಳೆ ಮೊಳಗಲಿದೆ ಕನ್ನಡದ ದನಿ

WhatsApp Image 2021 01 31 at 10.34.09 AM

ನಗರದ ಗೋಪಾಳ ಮುಖ್ಯ ಬಸ್ ನಿಲ್ದಾಣದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ವಿಜಯಾದೇವಿ ಅವರ ಮೆರವಣಿಗೆ ಯು ಸಾರೋಟಿನಲ್ಲಿ ನಡೆಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಬಿ.ಶಂಕರಪ್ಪ ಸೇರಿದಂತೆ ಅಪಾರ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ವಾದ್ಯ ಸಂಗೀತಗಳೊಂದಿಗೆ ಕನ್ನಡದ ಕಂಪು ಹೆಚ್ಚಿಸುವ ಘೋಷಣೆಗಳೊಂದಿಗೆ ಮರವಣೀಗೆ ಸಾಗಿತು.
ಬೆಳಗ್ಗೆ ಧ್ವಜಾರೋಹಣ ನೆರವೇರಿತು. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು, ಕನ್ನಡಾಸಕ್ತರು, ಸಾಹಿತಿಗಳು ಸೇರಿದಂತೆ ಜನರು ಭಾಗವಹಿಸಲಿದ್ದಾರೆ.

error: Content is protected !!