ಸುದ್ದಿ ಕಣಜ.ಕಾಂ | SHIVAMOGGA | POWER CUT
ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಹೊಂದಿರುವ 11 ಕೆ.ವಿ. ಮಾರ್ಗದಲ್ಲಿ ಭೂಗತ ಕೇಬಲ್ ಆಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 11 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
READ | ಕರ್ನಾಟಕ ಮತ್ತೆ ವೀಕೆಂಡ್ ಲಾಕ್, ಯಾವ ಜಿಲ್ಲೆಗಳಿಗೆ ನಿಯಮ ಅನ್ವಯ, ಏನಿರುತ್ತೆ, ಏನಿರಲ್ಲ?
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?
ಆರ್.ಎಂ.ಎಲ್. ನಗರ 1 ಮತ್ತು 2ನೇ ಹಂತ, ಮಂಜುನಾಥ ಬಡಾವಣೆ, ಟಿಪ್ಪುನಗರ ಎಡ ಭಾಗ, ಬುದ್ಧನಗರ, ಮಿಳ್ಳಘಟ್ಟ, ಎನ್.ಟಿ.ರಸ್ತೆ, ಓ.ಟಿ. ರಸ್ತೆ, ಬಿ.ಎಚ್.ರಸ್ತೆ, ಇಲಿಯಾಸ್ ನಗರ, ಕೆ.ಎಚ್.ಬಿ ಕಾಲೊನಿ, ಗೋಪಿಶೆಟ್ಟಿಹಳ್ಳಿ, ತುಂಗಾನಗರ, ಸೀಗೆಹಟ್ಟಿ, ಗಾರ್ಡನ್ ಏರಿಯಾ 1 ರಿಂದ 3ನೇ ಅಡ್ಡ ರಸ್ತೆಗಳು, ಸವಾರ್ ಲೈನ್ ರಸ್ತೆ, ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶ, ಎಲ್.ಎಲ್.ಆರ್ ರಸ್ತೆ, ಗೋಪಿವೃತ್ತ, ಜೆ.ಪಿ.ಎನ್. ರಸ್ತೆ, ದುರ್ಗಿಗುಡಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.