ಪುಸ್ತಕಗಳೇ ಇಲ್ಲದ ಸಾಹಿತ್ಯ ಸಮ್ಮೇಳನ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗೋಪಿಶೆಟ್ಟಿ ಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇವಲ ಒಂದು ಪುಸ್ತಕ ಮಳಿಗೆ ಮಾತ್ರ ಇತ್ತು!

ಇದನ್ನೂ ಓದಿ । ಕನ್ನಡ ಕಂಪು ಸೂಸಿದ ಮೆರವಣಿಗೆ, ನುಡಿ ತೇರಿನಿಂದ ಕಳೆಗಟ್ಟಿದ ಶಿವಮೊಗ್ಗ

ಸಾಹಿತ್ಯ ಗ್ರಾಮದ ಆವರಣದಲ್ಲಿ ಪುಸ್ತಕಗಳ ಹೊರತಾದ ಮಳಿಗೆಗಳು ಇದ್ದವು. ಬಟ್ಟೆ, ಅಡುಗೆ ಪದಾರ್ಥ ಹಾಗೂ ತಿಂಡಿ ತಿನಿಸಿನ ಸ್ಟಾಲ್ ಮಾತ್ರ ಹಾಕಲಾಗಿತ್ತು.
ಸಾಹಿತ್ಯವನ್ನು ಉಳಿಸಿ ಬೆಳೆಸುವ, ಭಾಷೆ ಅಭಿಮಾನ ಬೆಳೆಸುವ ಹಾಗೂ ಜನರಲ್ಲಿ ಓದುವ ಆಸಕ್ತಿ ಹೆಚ್ಚಿಸುವುದಕ್ಕಾಗಿ ಸಮ್ಮೇಳನಗಳ ಬಹುದೊಡ್ಡ ಪಾತ್ರ ವಹಿಸುತ್ತವೆ. ಆದರೆ, ಬುದ್ಧಿವಂತರ ಜಿಲ್ಲೆ ಹಾಗೂ ಸಾಹಿತ್ತಿಕವಾಗಿ ಶ್ರೀಮಂತ ಇತಿಹಾಸ ಇರುವ ಶಿವಮೊಗ್ಗದಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ ಆ ದೃಷ್ಟಿಯೇ ಕಾಣುತ್ತಿರಲಿಲ್ಲ.

error: Content is protected !!