
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತಾಲೂಕಿನ ಕುರುವಳ್ಳಿ ಬಳಿಯ ವಿಶ್ವಕರ್ಮ ಸಮುದಾಯ ಭವನದಲ್ಲಿ ನಿನ್ನೆ ಸಂಜೆ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಣ್ಣ(58) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಮೃತರನ್ನು ಬೀರೇಶ್ (35), ಮಂಜಾ (46) ಎಂದು ಗುರುತಿಸಲಾಗಿದೆ.
READ | ನಿರ್ಮಾಣ ಹಂತದ ಸಮುದಾಯ ಭವನ ಕಟ್ಟಡದಲ್ಲಿ ಡಬಲ್ ಮರ್ಡರ್
ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದಲ್ಲಿ ರಾಜಣ್ಣ, ಬೀರೇಶ್ ಮತ್ತು ಮಂಜಾ ಕೆಲಸ ಮಾಡುತ್ತಿದ್ದರು. ಸಂಜೆ ಇವರ ನಡುವೆ ಜಗಳವಾಗಿದೆ. ಆಗ ರಾಜಣ್ಣ ಇಬ್ಬರ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.