ಭದ್ರಾವತಿಯ ಆರ್.ಎ.ಎಫ್ ಫಲಕದಲ್ಲಿ ಕನ್ನಡಕ್ಕೆ ಅವಹೇಳನ | ಕೇಂದ್ರದ ಹೇಳಿಕೆಗೆ ಕನ್ನಡಿಗರು ಕೆಂಡಾಮಂಡಲ, ಕಾರಣವೇನು?

 

 

ಸುದ್ದಿ ಕಣಜ.ಕಾ
ಶಿವಮೊಗ್ಗ: ಭದ್ರಾವತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನವರಿ 16ರಂದು ಶಿಲಾನ್ಯಾಸಗೊಳಿಸಿರುವ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್.ಎ.ಎಫ್) ವಿವಾದ ಇಷ್ಟಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಕಂಪ್ಲೀಟ್ ಸುದ್ದಿಗಳು ಇಲ್ಲಿವೆ |  ಆರ್‍ಎಎಫ್ ಅಡಿಗಲ್ಲು ಫಲಕದಲ್ಲಿ ಕನ್ನಡವೇ ಮಾಯ, ಮಾಜಿ ಸಿಎಂ ಎಚ್.ಡಿ.ಕೆ. ಟ್ವೀಟ್‍ನಲ್ಲಿ ಹೇಳಿದ್ದೆನು?, ನೆಟ್ಟಿಗರು ಫುಲ್ ಗರಂ, ಸ್ವಾಭಿಮಾನಿ ಕನ್ನಡಿಗರ ಆಕ್ರೋಶ, ಡಿಕೆಶಿ, ಸಿದ್ದರಾಮಯ್ಯ ಹೇಳಿದ್ದೇನು?

ಶಿಲಾ ಫಲಕದ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಇದ್ದುದ್ದರಿಂದ ಕನ್ನಡಕ್ಕೆ ಅವಹೇಳನ ಮಾಡಲಾಗಿದೆ ಎಂದು ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಯವರೆಗೆ ಕನ್ನಡ ಅಸ್ಮಿತೆಗೆ ಸೀಮಿತವಾಗಿದ್ದ ಆಕ್ರೋಶ ಈಗ ಮತ್ತೊಂದು ರೂಪ ತಾಳಿದೆ. ಅದಕ್ಕೆ ಕಾರಣ ಕೇಂದ್ರ ಸರ್ಕಾರ ನೀಡಿರುವ ಉತ್ತರ!

ಕೇಂದ್ರದ ವಾದವೇನು | ಕೇಂದ್ರ ಸರ್ಕಾರದ ಕಚೇರಿಗಳು ಕರ್ನಾಟಕದಲ್ಲೂ ಕನ್ನಡ ಬಳಸಬೇಕಿಲ್ಲ. ತ್ರಿಭಾಷಾ ಸೂತ್ರವನ್ನು ರಾಜ್ಯಗಳು ಪಾಲಿಸಿದರೆ ಸಾಕು. ತಾವು ಅನುಸರಿಸುವುದು ದ್ವಿಭಾಷಾ ಸೂತ್ರ ಎಂದು ಪ್ರತಿಪಾದಿಸಲಾಗಿದೆ.
ಮುಂದುವರಿದು, 1963ರ ಆಡಳಿತ ಭಾಷೆ ಕಾಯ್ದೆ ಹಾಗೂ 1976 ಆಡಳಿತ ಭಾಷೆ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರ ಕಚೇರಿಗಳಲ್ಲಿ ಕೇವಲ ದ್ವಿಭಾಷಾ ನೀತಿ ಮಾತ್ರ ಅನ್ವಯ ಆಗುತ್ತದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕೇಂದ್ರದ ಅಧೀನದಲ್ಲಿ ಇದೆ. ಹೀಗಾಗಿ, ಇಲ್ಲಿಯೂ ದ್ವಿಭಾಷೆಯೇ ಅನ್ವಯವಾಗುತ್ತದೆ ಎಂದಿದ್ದಾರೆ.
ಎಚ್.ಡಿ.ಕೆ. ದನಿ ಎತ್ತಿದ್ದರು | ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದರು. ಅದಾದ ಬಳಿಕ ರಾಜ್ಯದೆಲ್ಲೆಡೆ ಭದ್ರಾವತಿಯಲ್ಲಿ ಸ್ಥಾಪನೆ ಆಗಿರುವ ಆರ್.ಎ.ಎಫ್ ಘಟಕದ ಶಿಲಾ ಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದೇ ಇರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

error: Content is protected !!