ಹುಣಸೋಡು ಸ್ಫೋಟ | ಚಿಕ್ಕಬಳ್ಳಾಪುರ ಘಟನೆ ಬೆನ್ನಲ್ಲೇ ಮತ್ತೆ ಕೇಳಿಬಂತು ಸಿಬಿಐ ತನಿಖೆಯ ಕೂಗು

 

 

ಸುದ್ದಿ ಕಣಜ.ಕಾಂ
Kimmane Ratnakar 1ಶಿವಮೊಗ್ಗ: ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸಿಬಿಐ ತನಿಖೆಯ ಕೂಗು ಕೇಳಿ ಬರಲಾರಂಭಿಸಿದೆ.
ಶಿವಮೊಗ್ಗದ ಹುಣಸೋಡು ಹಾಗೂ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಕಲ್ಲು ಕ್ವಾರಿ ಸ್ಫೋಟ ಪ್ರಕರಣದಲ್ಲಿ 12ಕ್ಕೂ ಅಧಿಕ ಮೃತಪಟ್ಟಿದ್ದಾರೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಒತ್ತಾಯಿಸಿದರು.

ಸಿಒಡಿಯಿಂದ ನ್ಯಾಯ ಸಿಗದು | ಸಿಒಡಿ ತನಿಖೆಗೆ ಒಪ್ಪಿಸಿದ್ದಲ್ಲಿ ಅದರಿಂದ ನ್ಯಾಯ ಸಿಗುವುದಿಲ್ಲ. ಆದ್ದರಿಂದ, 2 ಘಟನೆಗಳನ್ನು ಸಿಐಡಿಗೆ ಒಪ್ಪಿಸಬೇಕು. ಒಂದುವೇಳೆ, ಸರ್ಕಾರ ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಇದಕ್ಕಾಗಿ ಒತ್ತಾಯ ಹೇರಲಾಗುವುದು. ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡರಾದ ವೇದಾ ವಿಜಯ ಕುಮಾರ್, ಯೋಗೇಶ್, ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.

error: Content is protected !!