ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಜನವರಿ ಹೊತ್ತಿಗೆ ಮಂಗನ ಕಾಯಿಲೆ ಮಲೆನಾಡಿಗೆ ಕಾಡುತ್ತಿತ್ತು. ಆದರೆ, ಈ ವರ್ಷ ಮಾರ್ಚ್ನಲ್ಲಿ ವರ್ಷದ ಮೊದಲ ಪ್ರಕರಣ ದೃಢಪಟ್ಟಿದೆ.
ಇದನ್ನೂ ಓದಿ | ಇದುವರೆಗೆ ಎರಡು ಮಂಗನ ಕಾಯಿಲೆ ಪತ್ತೆ, ಯಾರಲ್ಲಿ ಸೋಂಕು ದೃಢ?
ಕೆ.ಎಫ್.ಡಿ ಲಕ್ಷಣಗಳಿದ್ದುದ್ದರಿಂದ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ವೈರಾಣು ಇರುವುದು ದೃಢಪಟ್ಟಿದೆ.
ಶ್ರೀದೇವಿ ಲಸಿಕೆ ಪಡೆದಿರಲಿಲ್ಲ | ಕಟ್ಟೆಹಕ್ಲು ವ್ಯಾಪ್ತಿಯಲ್ಲಿ ಕೆಎಫ್.ಡಿ ಲಸಿಕೆಯನ್ನು ಬಹುತೇಕ ಎಲ್ಲರಿಗೂ ನೀಡಲಾಗಿದೆ. ಈಗ ಸೋಂಕು ಪತ್ತೆಯಾಗಿರುವ ಮಹಿಳೆಯ ಕುಟುಂಬದವರಿಗೂ ಲಸಿಕೆ ನೀಡಲಾಗಿದೆ. ಆದರೆ, ಮಹಿಳೆಯು ಚುಚ್ಚು ಮದ್ದು ಪಡೆದಿಲ್ಲ.
10 ಮಂಗಗಳ ಸಾವು | ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 10 ಮಂಗಗಳು ಮೃತಪಟ್ಟಿರುವುದು ದೃಢಪಟ್ಟಿದೆ. ಆದರೆ, ಯಾವುದರಲ್ಲೂ ಕೆ.ಎಫ್.ಡಿ. ವೈರಾಣು ಇಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.