ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸವಳಂಗ ರಸ್ತೆಯಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲುಸೇತುವೆ ಬಳಿ ಸ್ಮಾರ್ಟ್ ಸಿಟಿ (shimoga smart city) ಕೊಳವೆ ಮಾರ್ಗ ಬದಲಾಯಿಸುವ ಕಾಮಗಾರಿ ಕೈಗೊಂಡಿದ್ದು, ಸೆ. 27 ಮತ್ತು 28 ರಂದು ನಗರದ ವಿವಿಧೆಡೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕನನೀಸ ಮತ್ತು ಒಚ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
READ | ಶಿವಮೊಗ್ಗದಲ್ಲಿ ನಡೆದ ಮೊದಲ ಜನತಾದರ್ಶನ ವಿಶೇಷಗಳೇನು? ಎಷ್ಟು ಅಹವಾಲು ಸ್ವೀಕಾರ? ಸಚಿವ ಮಧು ಬಂಗಾರಪ್ಪ ಸರಳತೆಗೆ ಫಿದಾ
ಎಲ್ಲೆಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ?
ಬಸವೇಶ್ವರನಗರ, ನವುಲೆ, ಕುವೆಂಪು ಬಡಾವಣೆ, ಅಶ್ವಥ್‍ನಗರ, ಎಲ್.ಬಿ.ಎಸ್.ನಗರ, ಕೃಷಿನಗರ, ಶಾಂತಿನಗರ, ತ್ಯಾವರೆಚಟ್ನಳ್ಳಿ, ಬೊಮ್ಮನಕಟ್ಟೆ, ದೇವರಾಜ್‍ಅರಸ್ ಬಡಾವಣೆ, ಸಹ್ಯಾದ್ರಿನಗರ, ಜೆ.ಎಚ್.ಪಟೇಲ್ ಬಡಾವಣೆ, ಶಾರದಮ್ಮ ಬಡಾವಣೆ, ಸಹಕಾರಿನಗರ, ಖಾಜಿ ಖಾನ್ ಬಡಾವಣೆ, ಸೋಮಿನಕೊಪ್ಪ ಹಾಗೂ ಈ ಬಡಾವಣೆಗಳಿಗೆ ಹೊಂದಿಕೊಂಡಂತಹ ಬಡಾವಣೆಗಳಲ್ಲಿ ದೈನಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.