ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲೆಯ ಗಾಜನೂರಿನ (Gajanur) ಜವಾಹರ ನವೋದಯ (Javahara navodaya) ವಿದ್ಯಾಲಯದ 2024-25 ನೇ ಸಾಲಿನ 11 ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ತುಂಬಲು ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ವೆಬ್ಸೈಟ್ https://cbseitms.nic.in/2023/nvsxi_11 ನಲ್ಲಿ ಸಲ್ಲಿಸಲು
ಅ.31 ಕೊನೆಯ ದಿನಾಂಕವಾಗಿರುತ್ತದೆ. 2023-24 ನೇ ಸಾಲಿನಲ್ಲಿ ಸರ್ಕಾರಿ/ ಸರ್ಕಾರೇತರ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಎಂದು ಗಾಜನೂರಿನ ಜವಾಹರ್ ನವೋದಯ ವಿದ್ಯಾಯದ ಪ್ರಾಚಾರ್ಯರು ತಿಳಿಸಿದ್ದಾರೆ.
ದೀಕ್ಷಾ ಭೂಮಿ ಭೇಟಿಗೆ ಅರ್ಜಿ ಆಹ್ವಾನ
SHIMOGA: 2023-24ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಗೆ (deeksha bhumi) ಭೇಟಿ ನೀಡುವ ಯಾತ್ರಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ ಲಿಂಕ್ https://sw.kar.nic.in ಮೂಲಕ ಅರ್ಜಿಯನ್ನು ಅ.10 ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾನಗರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ : 08182-240512 ಮತ್ತು 9480843194 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಜೇನು ಸಾಕಾಣೆ’ಗೆ ಅರ್ಜಿ ಆಹ್ವಾನ
SHIMOGA: ಶಿವಮೊಗ್ಗ ಜಿಲ್ಲೆ ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಜಿಲ್ಲಾ ವಲಯದ ಜೇನು ಸಾಕಾಣೆ ಕಾರ್ಯಕ್ರಮದಡಿ ಜೇನುಕೃಷಿ ತರಬೇತಿ/ಜೇನುಪಟ್ಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್ಗಳಿಗೆ ಸಹಾಯಧನ ನೀಡಲು ಸರ್ಕಾರದ ಸುತ್ತೋಲೆಯನುಸಾರ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು/ ಸಾರ್ವಜನಿಕರು ಈ ಕೆಳಕಂಡ ಶಿವಮೊಗ್ಗ ಜಿಲ್ಲೆಯ ಎನ್ಐಸಿ ವೆಬ್ಸೈಟ್ ಬಳಸಿ, ಅಗತ್ಯ ದಾಖಲಾತಿಗಳೊಂದಿಗೆ ಅ.10 ರೊಳಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಅಥವಾ ನೇರವಾಗಿ ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ
ಶಿವಮೊಗ್ಗ 08182-279415/9900046087, ಭದ್ರಾವತಿ 08282-295029/9448238921, ಶಿಕಾರಿಪುರ 08187-223544/9663634388, ಸೊರಬ 08184-295112/9902170900, ಸಾಗರ 08183-295124/7892782514, ಹೊಸನಗರ 08185-295364/9591695327, ತೀರ್ಥಹಳ್ಳಿ 08181-228151/6360923705 ನ್ನು ಮತ್ತು ತಾಲ್ಲೂಕು ತೋಟಗಾರಿಕೆ ಇಲಾಖಾ ಕಚೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.