ಸುದ್ದಿ ಕಣಜ.ಕಾಂ
ನವದೆಹಲಿ: ಡಿಎಲ್ ನವೀಕರಣ, ಡಿಎಲ್ ನಕಲು ಪ್ರತಿ, ವಾಹನ ಚಾಲನಾ ಪರವಾನಗಿ ನವೀಕರಣ, ವಾಹನಗಳ ಆರ್.ಸಿ ಸೇರಿ ಒಟ್ಟು 18 ಸೇವೆಗಳು ಪಡೆಯಲು ಇನ್ಮುಂದೆ ಆರ್.ಟಿ.ಒ ಕಚೇರಿಗೆ ಹೋಗುವ ಅಗತ್ಯವಿಲ್ಲ.
ಲಭ್ಯ ಸೇವೆಗಳ ಪಟ್ಟಿ
- ಕಲಿಕಾ ಪರವಾನಗಿ (Learner’s licence)
- ಚಾಲನ ಪರವಾನಗಿ ನವೀಕರಣ
- ಡಿಎಲ್ ನಕಲು ಪ್ರತಿ ಪಡೆಯಲು
- ಡಿಎಲ್ ಮತ್ತು ನೊಂದಣಿ ದಾಖಲೆಗಳಲ್ಲಿನ ವಿಳಾಸ ಬದಲಾವಣೆ
- ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಲು
- ವಾಹನದ ಆರ್.ಸಿ ದಾಖಲೆ ಮರಳಿಸುವುದು
- ಮೋಟಾರು ವಾಹನದ ತಾತ್ಕಾಲಿಕ ನೋಂದಣಿಗೆ ಅರ್ಜಿ
- ಮೋಟಾರು ವಾಹನದ ನೋಂದಣಿಗೆ ಅರ್ಜಿ
- ನೋಂದಣಿ ದ್ವಿಪ್ರತಿ ಪ್ರಮಾಣಪತ್ರ ವಿತರಣೆ ಅರ್ಜಿ
- ನೋಂದಣಿ ಪ್ರಮಾಣ ಪತ್ರಕ್ಕಾಗಿ ಎನ್.ಒ.ಸಿ ಅನುಮತಿ ಅರ್ಜಿ
- ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆ ನೋಟಿಸ್
- ಮೋಟಾರು ವಾಹನದ ಮಾಲೀಕತ್ವ ವರ್ಗಾವಣೆಗೆ ಅರ್ಜಿ
- ನೋಂದಣಿ ಪ್ರಮಾಣ ಪತ್ರದಲ್ಲಿ ವಿಳಾಸ ಬದಲಾವಣೆಯ ಮಾಹಿತಿ
- ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರದಿಂದ ತರಬೇತಿಗಾಗಿ ನೊಂದಣಿಗೆ ಅರ್ಜಿ
- ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನದ ನೋಂದಣಿ
- ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನದ ಹೊಸ ನೋಂದಣಿಯ ಗುರುತು ನಿಯೋಜನೆ
- ಬಾಡಿಗೆ ಮತ್ತು ಖರೀದಿ ಒಪ್ಪಂದದ ಅನುಮತಿ ಅನುಮೋದನೆ
- ಬಾಡಿಗೆ ಮತ್ತು ಖರೀದಿ ಒಪ್ಪಂದ ರದ್ದತಿ