ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಾದ್ಯಂತ ಡಿವೈಎಸ್ಪಿ, ಪಿಐಗಳ ವರ್ಗಾವಣೆ ಮಾಡಿ ಆದೇಶಿಸಿರುವ ಸರ್ಕಾರ ತೀರ್ಥಹಳ್ಳಿಯ ಡಿವೈಎಸ್ಪಿ ಡಾ.ಕೆ.ಎಂ.ಸಂತೋಷ್ ಅವರನ್ನು ಚನ್ನಗಿರಿಗೆ ವರ್ಗಾವಣೆ ಮಾಡಿದೆ.
ಇದನ್ನೂ ಓದಿ | ಇಬ್ಬರು ವಿದ್ಯಾರ್ಥಿಗಳು, 1 ಸಿಬ್ಬಂದಿ ಸೇರಿ 29 ಜನರಿಗೆ ಕೊರೊನಾ
ಹರೀಶ್ ಪಟೇಲ್ ದೊಡ್ಡಪೇಟೆಗೆ ವಾಪಸ್ | ಈ ಹಿಂದೆ ದೊಡ್ಡಪೇಟೆಯ ಸಿಪಿಐ ಆಗಿದ್ದ ಹರೀಶ್ ಕೆ.ಪಟೇಲ್ ಅವರನ್ನು ವಾಪಸ್ ಇದೇ ಠಾಣೆಗೆ ನಿಯೋಜನೆ ಮಾಡಲಾಗಿದೆ. ಇಲ್ಲಿದ್ದ ಸಿಪಿಐ ಆರ್.ವಸಂತ್ ಕುಮಾರ್ ಅವರನ್ನು ಶಿವಮೊಗ್ಗದ ಎಸಿಬಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.