ಇಂದು ಶಿವಮೊಗ್ಗ ನಗರದ ವಾಹನಗಳ ಸಂಚಾರ ಮಾರ್ಗ ಬದಲಾವಣೆ, ಯಾವ ಮಾರ್ಗ ಬಂದ್?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾರ್ಚ್ 13ರಂದು ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೇರೆ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಶಿವಮೊಗ್ಗ ನಗರಕ್ಕೆ ಬರುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಈ ಕೆಳಕಂಡ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಮಾರ್ಗ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!

ಆದರೆ, ಮಾರ್ಗ ಬದಲಾವಣೆಯು ಸಾರ್ವಜನಿಕರಿಗೆ ಅನ್ವಯವಾಗುವುದಿಲ್ಲ. ಬದಲಿಗೆ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬರುವ ವಾಹನ ಸವಾರರಿಗೆ ಮಾತ್ರ ಮಾರ್ಗ ಬದಲಾವಣೆ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.
ಮಾರ್ಗಗಳ ಮಾಹಿತಿ

  1. ಭದ್ರಾವತಿಯ ಕಡೆಯಿಂದ ಬರುವ ವಾಹನಗಳಿಗೆ ಎಂ.ಆರ್.ಎಸ್ ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ- ಇಲಿಯಾಜ್ ನಗರ- ಬುದ್ಧ ನಗರ
  2. ತೀರ್ಥಹಳ್ಳಿಯ ಕಡೆಯಿಂದ ಬರುವ ವಾಹನಗಳಿಗೆ ನ್ಯೂ ಮಂಡ್ಲಿ ವೃತ್ತ- ಇಲಿಯಾಜ್ ನಗರ- ಬುದ್ಧ ನಗರ
  3. ಸಾಗರದ ಕಡೆಯಿಂದ ಬರುವ ವಾಹನಗಳಿಗೆ ಆಲ್ಕೊಳ ಸರ್ಕಲ್- ಗೋಪಾಳ- ಇಲಿಯಾಜ್ ನಗರ- ಬುದ್ಧ ನಗರ
  4. ಶಿಕಾರಿಪುರದ ಕಡೆಯಿಂದ ಬರುವ ವಾಹನಗಳಿಗೆ
    ಉಷಾ ನಸಿರ್ಂಗ್ ಹೋಂ ವೃತ್ತ- ವಿನೋಬನಗರ ಪೊಲೀಸ್ ಚೌಕಿ- ಆಲ್ಕೊಳ ವೃತ್ತ- ಗೋಪಾಳ- ಇಲಿಯಾಜ್ ನಗರ-ಬುದ್ಧ ನಗರ
  5. ಚಿತ್ರದುರ್ಗದ ಕಡೆಯಿಂದ ಬರುವ ವಾಹನಗಳಿಗೆ
    ವಿದ್ಯಾನಗರ- ಎಂ.ಆರ್.ಎಸ್ ವೃತ್ತ- ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ- ಇಲಿಯಾಜ್ ನಗರ- ಬುದ್ಧ ನಗರ
  6. ಹೊನ್ನಾಳಿ ಕಡೆಯಿಂದ ಬರುವ ವಾಹನಗಳಿಗೆ ಶಂಕರಮಠ ವೃತ್ತ – ವಿದ್ಯಾನಗರ – ಎಂ.ಆರ್.ಎಸ್ ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ- ಇಲಿಯಾಜ್ ನಗರ- ಬುದ್ಧ ನಗರ

error: Content is protected !!