ಫೇಕ್ ಸರ್ಟಿಫಿಕೇಟ್ ಮಾಡುತ್ತಿದ್ದವರು ಸಿಕ್ಕಿಬಿದ್ದಿದ್ದು ಹೇಗೆ, ಎಷ್ಟು ವರ್ಷದಿಂದ ಈ ದಂಧೆ ಮಾಡುತ್ತಿದ್ದ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಫೋರ್ಜರಿ ಮಾಡಿ ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ

ಗಾಂಧಿನಗರದ ಕಂಪ್ಯೂಟರ್ ಶಾಪ್ ವೊಂದರಲ್ಲಿ ಫೋರ್ಜರಿ ದಂಧೆ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಜಯನಗರ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗಕ್ಕೆ ಬಂಧನಕ್ಕೆ ನೀಡಿದ್ದಾರೆ.
ಬಂಧಿತರು | ನೇಪಾಳ ಮೂಲದ ಗಾಂಧಿನಗರ ನಿವಾಸಿ ವಿಷ್ಣು, ನಗರ ನಿವಾಸಿಗಳಾದ ಮಹೇಶ್, ಸುರೇಶ್ ಮತ್ತು ದೇವರಾಜ್ ಎಂಬುವವರನ್ನು ಬಂಧಿಸಲಾಗಿದೆ.
20 ರೂಪಾಯಿ ಇ-ಸ್ಟ್ಯಾಂಪ್ ನಿಂದ ಹೊರಬಂತು ದಂಧೆ | 20 ರೂಪಾಯಿ ಸ್ಟ್ಯಾಂಪ್ ಮಾಡಿಸಿಕೊಳ್ಳುವ ನೆಪದಲ್ಲಿ ಕಂಪ್ಯೂಟರ್ ಅಂಗಡಿಗೆ ಹೋದ ಪೊಲೀಸರು ವಿಷ್ಣುಗೆ ಭೇಟಿಯಾಗಿದ್ದಾರೆ. ಇ-ಸ್ಟ್ಯಾಂಪ್ ಅನ್ನು 100 ರೂಪಾಯಿ ಮುಖಬೆಲೆಗೆ ಬದಲಿಸಿ ಕೊಡುವಂತೆ ಕೇಳಿದ್ದಾರೆ. ತಕ್ಷಣ ಅದನ್ನು ಮೂಲದಾಖಲೆಯಂತೆಯೇ ಮಾಡಿಕೊಟ್ಟಿದ್ದಾರೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ತಲೆ ಎತ್ತಿದ ‘ಗೋಲ್ಡ್ ಪಾಲಿಶ್ ಗ್ಯಾಂಗ್’, ಮಹಿಳೆಯರೆ ಯಾಮಾರಿದರೆ ಕಳೆದುಕೊಳ್ತೀರಾ ಬಂಗಾರ!

ಈತ ಕಳೆದ ಐದಾರು ವರ್ಷಗಳಿಂದ ದಂಧೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ನಕಲಿ ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಇ-ಸ್ಟ್ಯಾಂಪ್, ರೇಷನ್ ಕಾರ್ಡ್ ಸೇರಿದಂತೆ ವಿವಿಧ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡುತ್ತಿದ್ದ. ಜಯನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

error: Content is protected !!