ಮಂಗಳವಾದ್ಯಗಳೊಂದಿಗೆ ಡಿಸಿಗೆ ಸ್ವಾಗತ, ಎಲ್ಲೆಲ್ಲಿ ಭೇಟಿ ನೀಡಿದರು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಯೋಜನೆ ಅನುಷ್ಠಾನಗೊಳಿಸಿದ ಬಳಿಕ ಇದು ಜಿಲ್ಲಾಧಿಕಾರಿಗಳ ಎರಡನೇ ಗ್ರಾಮ ವಾಸ್ತವ್ಯವಾಗಿದೆ.

ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ

Aladahalli DC 1

ಹೊಳಲೂರು ಹೋಬಳಿ ವ್ಯಾಪ್ತಿಯ ಆಲದಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಶನಿವಾರ ಭೇಟಿ ಮಾಡಿದ್ದಾರೆ. ಇಂದು ರಾತ್ರಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಭರ್ಜರಿ ಸ್ವಾಗತ | ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮಂಗಳ ವಾದ್ಯ, ಪೂರ್ಣ ಕುಂಭ ಹೊತ್ತು ಸ್ವಾಗತಿಸಿದರು.
ಹಳ್ಳಿಯೊಳಗಡೆ ಬಂದಿದ್ದೇ ಅವರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಆಸ್ಪತ್ರೆಯ ವ್ಯವಸ್ಥೆ, ಅಲ್ಲಿ ನೀಡಲಾಗುತ್ತಿರುವ ಸೇವೆಯನ್ನು ಪರಿಶೀಲಿಸಿದರು. ಈ ಬಗ್ಗೆ ವೈದ್ಯರಿಂದ ಮಾಹಿತಿ ಸಂಗ್ರಹಿಸಿದರು.
ಬಳಿಕ ಅಂಗನವಾಡಿಗೆ ತೆರಳಿದ ಅವರು ಮಕ್ಕಳಿಂದ ಮಾಹಿತಿ ಪಡೆದರು. ಮಕ್ಕಳಿಗೆ ನೀಡುವ ಆಹಾರ ಧಾನ್ಯಗಳನ್ನು ಪರಿಶೀಲಿಸಿದರು.

Aladahalli DC 2

error: Content is protected !!