34 ವರ್ಷಗಳಿಂದ ಕೋರ್ಟಿಗೆ ಗೈರಾಗಿದ್ದ ಆರೋಪಿ ಅರೆಸ್ಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ 34 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ರಾಮಿನಕೊಪ್ಪ ನಿವಾಸಿ ರೂಪ್ಲಾನಾಯ್ಕ (68) ಬಂಧಿತ ಆರೋಪಿ. 1987ನೇ ಸಾಲಿನಲ್ಲಿ ಹೊಳೆಹೊನ್ನೂರು ಪೆÇಲೀಸ್ ಠಾಣೆಯಲ್ಲಿ ದಾಖಲಾದ ಮನೆಯಲ್ಲಿ ಕಳ್ಳತನ ಸಂಬಂಧ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆರೋಪಿಯ ಬಂಧನಕ್ಕೆ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತ್ತು.

ಆರೋಪಿಯ ಪತ್ತೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿ.ಎಸ್.ಐ ಸುರೇಶ್ ಅವರು ತಮ್ಮ ಠಾಣೆ ಸಿಬ್ಬಂದಿ ಲಿಂಗೇಗೌಡ, ಮಲ್ಲಿಕಾರ್ಜುನ್, ಪ್ರಕಾಶ್, ದೇವೇಂದ್ರ ನಾಯ್ಕ ಅವರನ್ನು ಕರ್ತವ್ಯಕ್ಕೆ ನೇಮಿಸಿದ್ದರು. ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

error: Content is protected !!