ಕೊರೊನಾಗೆ ಮತ್ತೊಂದು ಸಾವು, ಎರಡನೇ ಅಲೆಗೆ ಐದನೇ ಬಲಿ, ಶಿವಮೊಗ್ಗ ತಾಲೂಕಿನಲ್ಲಿ ಕೊರೊನಾ ಸ್ಫೋಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ತನ್ನ ಕರಿಛಾಯೆ ಜಿಲ್ಲೆಯಾದ್ಯಂತ ವಿಸ್ತರಿಸುತ್ತಿದೆ. ಎರಡನೇ ಅಲೆಗೆ ಒಂದೇ ತಿಂಗಳಲ್ಲಿ ಐದನೇ ಬಲಿಯಾಗಿದ್ದು, ಶನಿವಾರ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ‌. ಇದುವರೆಗೆ ಸಾವಿನ ಸಂಖ್ಯೆ 354ಕ್ಕೆ ಏರಿಕೆಯಾಗಿದೆ.

READ | ಇನ್ಮುಂದೆ ದಿನದ 24 ಗಂಟೆ ಶಿವಮೊಗ್ಗದಲ್ಲಿ ನಡೆಯಲಿದೆ ಕೊರೊನಾ ಟೆಸ್ಟ್, 2ನೇ ಅಲೆಗೆ ಸಿದ್ಧತೆ ಜೋರು, ಬರಲಿವೆ ಹೆಚ್ಚುವರಿ ಆಂಬ್ಯುಲೆನ್ಸ್

ಮೃತ ವ್ಯಕ್ತಿಯಲ್ಲಿ ಹೊರ ರಾಜ್ಯ ಪ್ರಯಾಣ ಬೆಳೆಸಿದ್ದ 52 ವರ್ಷದ ವ್ಯಕ್ತಿಯಲ್ಲಿ ರೋಗದ ಲಕ್ಷಣಗಳಿದ್ದವು ಎಂದು ತಿಳಿದುಬಂದಿದೆ.
ಇಂದು ಸೋಂಕಿತರ ಸಂಖ್ಯೆ ನೂರೈವತ್ತರ ಸನಿಹ | ಶನಿವಾರ ಎಂಟು ವಿದ್ಯಾರ್ಥಿ ಹಾಗೂ ಎಂಟು ಸಿಬ್ಬಂದಿ ಸೇರಿ ಒಟ್ಟು 146 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. 84 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೋವಿಡ್ ವಾರ್ಡಿನಲ್ಲಿ‌ 177, ಖಾಸಗಿ‌ ಆಸ್ಪತ್ರೆಯಲ್ಲಿ 79, ಹೋಮ್ ಐಸೋಲೇಷನ್ ನಲ್ಲಿ 392, ಟ್ರಿಯೇಜ್ ನಲ್ಲಿ‌ 31 ಜನ ಸೋಂಕಿತರಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 679‌ ಇದೆ.
2,773 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, 1,816 ವರದಿ ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ | ಶಿವಮೊಗ್ಗ 78, ಭದ್ರಾವತಿ 17, ಶಿಕಾರಿಪುರ 13, ತೀರ್ಥಹಳ್ಳಿ 6, ಸೊರಬ 5, ಸಾಗರ 16, ಹೊಸನಗರ 7 ಹಾಗೂ ಹೊರ ಜಿಲ್ಲೆಯ 4 ಪ್ರಕರಣ ಪತ್ತೆಯಾಗಿವೆ.

https://www.suddikanaja.com/2021/01/08/man-dead-due-to-covid/

error: Content is protected !!