ಸೆಂಟ್ರಲ್ ಜೈಲಿನ ಇಬ್ಬರು ಕೈದಿಗಳಿಗೆ ಕೊರೊನಾ, ಇಲ್ಲಿಗೆ ಕರೆತಂದು 3 ದಿನವಾಗಿತ್ತು

 

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೂರು ದಿನಗಳ ಹಿಂದೆ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ತರಲಾಗಿದ್ದ ಇಬ್ಬರು ಕೈದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

READ | ಮುಂದುವರಿದ ಕೊರೊನಾ ಅಟ್ಟಹಾಸ, ಒಂದು ಸಾವು, ಕೊರೊನಾ ಡಬಲ್ ಸೆಂಚ್ಯೂರಿ

ಇವರನ್ನು ಇತ್ತೀಚೆಗೆ ಶಿವಮೊಗ್ಗ ಜೈಲಿಗೆ ಕರೆದುಕೊಂಡು ಬರಲಾಗಿತ್ತು. ಕೋವಿಡ್ ಹಿನ್ನೆಲೆ ಜೈಲಿನಲ್ಲಿ ಪ್ರತ್ಯೇಕ ಸೆಲ್ ಗಳಲ್ಲಿ ಇರಿಸಲಾಗಿತ್ತು. ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಒಬ್ಬ ಕೈದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇವರನ್ನು ಪ್ರತ್ಯೇಕ ಸೆಲ್ ನಲ್ಲಿ ಇರಿಸಿದ ಪರಿಣಾಮ ಯಾರ ಪ್ರಾಥಮಿಕ ಸಂಪರ್ಕಕ್ಕೂ ಬಂದಿಲ್ಲ.

error: Content is protected !!