ನಕಲಿ‌ ಫೇಸ್ಬುಕ್ ಖಾತೆ ತೆರೆದು, ಯುವತಿಗೆ ಅಶ್ಲೀಲ ಫೋಟೊ ಕಳುಹಿಸಿದ್ದ ವ್ಯಕ್ತಿ‌ ಅರೆಸ್ಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಯುವತಿ ಹೆಸರಿನಲ್ಲಿ‌ ನಕಲಿ ಫೇಸ್‌ ಬುಕ್‌ ಖಾತೆ ತೆರದು ಅಶ್ಲೀಲ ಫೋಟೋಗಳನ್ನು ಹಾಕಿ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಚಿಕ್ಕಮಗಳೂರು‌ ಜಿಲ್ಲೆಯ ಹಿರೇಮಗಳೂರು ಮೂಲದ ವೇಣುಗೋಪಾಲ್‌ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಖಾಸಗಿ ಕಂಪನಿಯೊಂದರ‌ ಮಾಲೀಕನಾಗಿದ್ದು,‌ ಕೃತ್ಯಕ್ಕೆ ಬಳಸಿದ 4 ಮೊಬೈಲ್‌ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಯುವತಿ ನೀಡಿದ ದೂರಿನನ್ವಯ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

error: Content is protected !!