ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪಶ್ಚಿಮಘಟ್ಟದ ಸೌಂದರ್ಯದಿಂದ ಆವೃತವಾಗಿರುವ ತೀರ್ಥಹಳ್ಳಿಯ ಬೆಡಗಿ ಶರಣ್ಯಾ ಶೆಟ್ಟಿ ಬೆಳ್ಳಿ ತೆರೆಗೆ ಲಗ್ಗೆ ಇಟ್ಟಿದ್ದಾರೆ. ಕಿರುತೆರೆಯಲ್ಲಿ ತಮ್ಮ ಅಭಿನಯದಿಂದ ಮನೆ ಮಾತಾಗಿರುವ ಮಲೆನಾಡಿ ಈ ಅಪ್ಪಟ ಪ್ರತಿಭೆ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟಿದ್ದಾರೆ.
https://www.suddikanaja.com/2021/01/07/amrutavahini-movie-release-hs-venkateshmurthy/
ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡಿರುವ ‘ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ಮಗಳ ಪಾತ್ರದಲ್ಲಿ ಮಿಂಚಿದ್ದಾರೆ. ಇದರ ಬೆನ್ನಲ್ಲೇ ರೆಟ್ರೋ ಕಥೆಯ `1980′ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಬಣ್ಣ ಹಚ್ಚಿದ್ದಾರೆ.
ಇವರ ಪ್ರತಿಭೆಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದಿವೆ. `ಸ್ಪೂಕಿ ಕಾಲೇಜ್’ನಲ್ಲಿ ಎರಡನೇ ನಾಯಕ ನಟಿಯಾಗಿ, ’31 ಡೇಸ್’ ಚಿತ್ರಕ್ಕೆ ನಿರಂಜನ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ’14 ಫೇಬ್’ ಚಿತ್ರದ ಅಭಿನಯದ ಮೂಲಕ ಅಭಿಮಾನಿಗಳ ಮನಸ್ಸು ಗೆದಿದ್ದಾರೆ. ಇನ್ನೂ ಕೆಲವು ಸಿನಿಮಾಗಳಲ್ಲಿ ಅವಕಾಶ ಲಭಿಸಲಿದೆ.
ಶಾಲಾ ದಿನಗಳಿಂದಲೇ ಉತ್ಕಟತನ | ಶಾಲಾ ದಿನಗಳಿಂದಲೇ ಕಲಾವಿದೆಯಾಗಬೇಕು ಎಂಬ ಉತ್ಕಟತನ ಹೊಂದಿದ್ದ ಶರಣ್ಯಾ ಈಗ ಕನ್ನಡದ ಕಿರುತೆರೆ, ಬೆಳ್ಳಿತೆರೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್, ಪ್ರೀಮಿಯರ್ ಶೋಗಳಿಗೆ ಹೋದಾಗ ತಾನೂ ಒಬ್ಬ ನಟಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಇವರಲ್ಲಿ ಜನ್ಮ ತಳೆಯಿತು. ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನಶೀಲರಾಗಿರುವ ಶರಣ್ಯಾ ಅವರಿಗೆ ‘ಗಟ್ಟಿ ಮೇಳ’ದ ಮೂಲಕ ಅವಕಾಶ ಒದಗಿಬಂತು. 50ಕ್ಕೂ ಅಧಿಕ ಕಂತುಗಳಲ್ಲಿ ಸಾಹಿತ್ಯ ಹೆಸರಿನಲ್ಲಿ ಖಳನಾಯಕಿಯಾಗಿ ನಟಿಸಿದ್ದಾರೆ.
https://www.suddikanaja.com/2021/04/15/kannada-movie-releasing-on-april-16/