ಮನುಷ್ಯರನ್ನು ಕಂಡಲ್ಲಿ ಕಚ್ಚುತ್ತಿದ್ದ ಮಂಗನ ಸೆರೆ, ಶಿವಮೊಗ್ಗ ಮೃಗಾಲಯದಲ್ಲಿ ಟ್ರೀಟ್ಮೆಂಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕಂಡ ಕಂಡಲ್ಲಿ ಜನರ ಮೇಲೆ ಎರಗಿ ಕಚ್ಚುತ್ತಿದ್ದ ಮಂಗವೊಂದನ್ನು ಸೆರೆ ಹಿಡಿಯಲಾಗಿದೆ.
ಗಂಡು ಮಂಗವನ್ನು ಸೆರೆ ಹಿಡಿದು ಶಿವಮೊಗ್ಗ ಮೃಗಾಲಯಕ್ಕೆ ಭಾನುವಾರ ತರಲಾಗಿದ್ದು, ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

READ | ಲಸಿಕೆಗಾಗಿ ಬೆಳಗ್ಗೆ 5 ಗಂಟೆಯಿಂದಲೇ ಸರದಿ

ಕಳೆದ ಹಲವು ದಿನಗಳಿಂದ ಹೊನ್ನಾಳಿಯಲ್ಲಿ ಈ ಮಂಗನ ಉಪಟಳ ಹೆಚ್ಚಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಹ ದೂರುಗಳನ್ನು ನೀಡಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ವೈದ್ಯಾಧಿಕಾರಿಗಳು ಅರಿವಳಿಕೆ ನೀಡಿ ಅದನ್ನು ತ್ಯಾವರೆಕೊಪ್ಪದಲ್ಲಿರುವ ಮೃಗಾಲಯಕ್ಕೆ ತರಲಾಗಿದೆ. ಪ್ರಸ್ತುತ ಪ್ರತ್ಯೇಕವಾಗಿ ಅದನ್ನು ಇಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈಗ ಮೂಶ್ಯಾ ಶಾಂತನಾಗಿದ್ದು, ಅರಚಟಾವೂ ಕಡಿಮೆಯಾಗಿದೆ.

error: Content is protected !!