ಲಾಕ್ ಡೌನ್ ರೂಲ್ಸ್ ಬ್ರೇಕ್ ಮಾಡಿದ 16 ಅಂಗಡಿ, 77 ವಾಹನ ಮಾಲೀಕರ ಮೇಲೆ ಬಿತ್ತು ಕೇಸ್, ತಾಲೂಕುವಾರು ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ ದಿ ಕರ್ನಾಟಕ ಎಪಿಡಿಮಿಕ್ ಡಿಸೆಸ್ಟರ್ ಕಾಯ್ದೆ 2020 ಅಡಿಯಲ್ಲಿ 16 ಪ್ರಕರಣಗಳನ್ನು ದಾಖಲಿಸಲಾಗಿದೆ.

READ | ಮೂರೂವರೆ ಸಾವಿರ ಗಡಿ ದಾಟಿದ ಕೊರೊನಾ ಆ್ಯಕ್ಟಿವ್ ಕೇಸ್, ಶಿವಮೊಗ್ಗ, ಸಾಗರದಲ್ಲಿ ಕೊರೊ‌ನಾ ಕೇಕೆ

ದೊಡ್ಡಪೇಟೆ ಠಾಣೆಯಲ್ಲಿ 4, ಜಯನಗರ ಠಾಣೆಯಲ್ಲಿ 01, ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ 1, ತೀರ್ಥಹಳ್ಳಿ ಠಾಣೆಯಲ್ಲಿ 2, ಹೊಸನಗರ ಠಾಣೆಯಲ್ಲಿ 1, ಸಾಗರ ಟೌನ್ ಠಾಣೆಯಲ್ಲಿ 1, ಶಿಕಾರಿಪುರ ಟೌನ್ ಠಾಣೆಯಲ್ಲಿ 5, ಭದ್ರವತಿ ಗ್ರಾಮಾಂತರ ಠಾಣೆಯಲ್ಲಿ 1 ಸೇರಿ ಒಟ್ಟು 16 ಪ್ರಕರಣ ದಾಖಲಿಸಲಾಗಿದೆ.
ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ 73 ದ್ವಿ ಚಕ್ರ ವಾಹನಗಳು ಮತ್ತು 4 ಕಾರು ಸೇರಿ ಒಟ್ಟು 77 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. IMV ಕಾಯ್ದೆ ಅಡಿಯಲ್ಲಿ ಒಟ್ಟು 196 ಪ್ರಕರಣಗಳನ್ನು ದಾಖಲಿಸಿ 86,900 ರೂಪಾಯಿ‌ ದಂಡ ವಿಧಿಸಲಾಗಿದೆ.

error: Content is protected !!