ಭದ್ರಾವತಿ ವಿ.ಐ.ಎಸ್‌.ಎಲ್‌ ಆಮ್ಲಜನಕ ಘಟಕ ಪುನರ್‌‌ ಆರಂಭ, ಎಷ್ಟು ಆಕ್ಸಿಜನ್‌‌ ಉತ್ಪಾದನೆ‌ ಆಗಲಿದೆ?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯ ವಿ.ಐ.ಎಸ್‌.ಎಲ್ ಕಾರ್ಖಾನೆಯಲ್ಲಿ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಆಮ್ಲಜನಕ ಉತ್ಪಾದನಾ ಘಟಕ ಪುನರ್ ಆರಂಭಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಆಮ್ಲಜನಕದ ಕೊರತೆ ನೀಗಿಸಲು ಪ್ರತಿ ತಾಲ್ಲೂಕಿನಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ.‌ ರಾಜ್ಯದ ೪ ಕಡೆ ಪ್ರಕೃತಿದತ್ತ ಆಮ್ಲಜನಕ ಶೇಖರಣಾ ಘಟಕ ಸ್ಥಾಪಿಸಲು ಮಂಜೂರಾಗಿದ್ದು, ಶಿಕಾರಿಪುರದಲ್ಲೂ ಸಹ ಈ ಘಟಕ ಶೀಘ್ರದಲ್ಲೇ ಆರಂಭವಾಗಲಿದೆ.
– ಬಿ.ವೈ.ರಾಘವೇಂದ್ರ, ಸಂಸದರು

ಮಾಧ್ಯಮಗೋಷ್ಠಿ ಮಂಗಳವಾರ ಮಾತನಾಡಿದ ಅವರು, ಘಟಕ ನಿರ್ಮಿಸಿ ಆಮ್ಲಜನಕ ಉತ್ಪಾದಿಸಲು ಈ ಹಿಂದಿದ್ದ ಕಂಪನಿಗೆ ವಹಿಸಲಾಗಿದೆ. ಆ ಕಂಪೆನಿಯ ಅಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮಾತುಕತೆ ನಡೆಸಿ 150 ಕೆ.ಎಲ್.ಆಮ್ಲಜನಕ ಉತ್ಪಾದಿಸಲು ನಿರ್ಧರಿಸಲಾಗಿದೆ.‌ ಇನ್ನೂ ಎರಡು ದಿನದಲ್ಲಿ ಉತ್ಪಾದನೆ ಆರಂಭಿಸಲಾಗುವುದು.

READ | ಅಯೋಧ್ಯೆಗೆ ಸೈಕಲ್‌ ಯಾತ್ರೆ ಮಾಡಿದ ಯುವಕ, ಕಾರಣವೇನು ಗೊತ್ತಾ?

ಉತ್ಪಾದಿಸಲಾಗುವ ಆಕ್ಸಿಜನ್ ಅನ್ನು ಜಂಬೋ ಸಿಲಿಂಡರ್‌ ಗೆ ತುಂಬಿಸಿ ಕಂಪೆನಿಯೇ ವಿತರಣೆ ಮಾಡಲಿದೆ. ಇದರ ಎಲ್ಲ‌ಖರ್ಚು ವೆಚ್ಚವನ್ನು ಸರ್ಕಾರವೇ ಭರಸಲಿದೆ ಎಂದು ಹೇಳಿದರು.
ಮೇಯರ್ ಸುನೀತಾ ಅಣ್ಣಪ್ಪ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಡಿ.ಎಸ್.ಅರುಣ್, ಎಸ್.ದತ್ತಾತ್ರಿ, ಎಸ್.ಜ್ಞಾನೇಶ್ವರ್, ಜಗದೀಶ್, ಕೆ.ಎಲ್.ಅಣ್ಣಪ್ಪ ಉಪಸ್ಥಿತರಿದ್ದರು.

https://www.suddikanaja.com/2021/01/12/raf-platoon-in-bhadravathi/

error: Content is protected !!