ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಿಗ್ ಬಾಸ್ ರಿಯಾಲಿಟಿ ಶೋ, ಅದರಲ್ಲೂ ಕಿಚ್ಚ ಸುದೀಪ್ ಅವರ ಕಂಚಿನ ಕಂಠ ಕೇಳುವುದೇ ಒಂದು ಖುಷಿ. ಇದರೊಂದಿಗೆ, ಬಿಗ್ ಬಾಸ್ ಮನೆಯಿಂದ ಯಾರು ಹೊರಗಡೆ ಬರುತ್ತಾರೆ, ಫೈನಲಿ ಯಾರು ಗೆಲ್ಲಬಹುದು….

READ | ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಭದ್ರಾವತಿ ಹುಡುಗಿ!

ಬಿಗ್ ಬಾಸ್ ಸೀಸನ್ 8 ಶುರುವಾದಾಗಿನಿಂದ ಅಭಿಮಾನಿಗಳಲ್ಲಿ ಇಂತಹ ಸಾಕಷ್ಟು ಕೌತುಕಗಳಿವೆ. ಆದರೆ, ಕೋವಿಡ್ ಕಾರಣದಿಂದಾಗಿ ಮೇ 10ರಿಂದ 24ರ ವರೆಗೆ ಹೇರಲಾಗಿರುವ ಲಾಕ್ ಡೌನ್ ಬಿಗ್ ಬಾಸ್ ಅರ್ಧಕ್ಕೆ ನಿಲ್ಲುವಂತೆ ಮಾಡಿದೆ. ಈ ಅವಧಿಯಲ್ಲಿ ಧಾರವಾಹಿ, ರಿಯಾಲಿಟಿ ಶೋ ಇತ್ಯಾದಿಗಳನ್ನು ಶೂಟಿಂಗ್ ಮಾಡುವಂತಿಲ್ಲ. ಹೀಗಾಗಿ, ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ. ಈ ಬಗ್ಗೆ ಖುದ್ದು ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.

big boss 8 suspendಪರಮೇಶ್ವರ್ ಹೇಳಿದ್ದೇನು?
‘ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲ ಖುಷಿಯಾಗಿದ್ದಾರೆ. ಐಸೋಲೇಷನ್ ನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಆನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.

READ | ‘ಪಾರು’ ಧಾರಾವಾಹಿಯಿಂದ ಮಾನ್ಸಿ ಜೋಶಿ ಎಕ್ಸಿಟ್, ಜರ್ನಿಯ ಅನುಭವ ಇಲ್ಲಿ ಹಂಚಿಕೊಂಡಿದ್ದಾರೆ…

ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ.’ ಎಂದು ಹೇಳಿದ್ದಾರೆ.

READ | ಮಲೆನಾಡಿನ ಬೆಡಗಿ ಬೆಳ್ಳಿತೆರೆಯಲ್ಲಿ ಹವಾ

ಬಿಗ್ ಬಾಸ್ ಅರ್ಧಕ್ಕೆ ಬ್ರೇಕ್ ಇದೇ ಮೊದಲು | ಕನ್ನಡ ಭಾಷೆಯಲ್ಲಿ ಪ್ರಸಾರಗೊಳ್ಳುತ್ತಿರುವ ಬಿಗ್ ಬಾಸ್ ಇದೇ ಮೊದಲು ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ. ಕಳೆದ ಏಳು ಶೋಗಳನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಶೇಷವೆಂದರೆ, ಕಳೆದ ವರ್ಷ ಲಾಕ್ ಡೌನ್ ಕಾರಣಕ್ಕಾಗಿಯೇ ಮಲಯಾಳಂ ನಲ್ಲಿ ಪ್ರಸಾರಗೊಳ್ಳುತ್ತಿರುವ ಬಿಗ್ ಬಾಸ್ ಶೋ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಯಾರ್ಯಾರಿದ್ದರು | ಪ್ರಸಕ್ತ ಬಿಗ್ ಬಾಸ್ ಮನೆಯಲ್ಲಿ ಅರವಿಂದ್, ಮಂಜು ಪಾವಗಡ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಚಂದ್ರಚೂಡ್, ಶಮಂತ್, ಶುಭಾ ಪುಂಜಾ, ವೈಷ್ಣವಿ, ಪ್ರಿಯಾಂಕಾ, ರಘು ಗೌಡ ಇದ್ದರು. ಇವರಲ್ಲಿ ಯಾರು ಗ್ರ್ಯಾಂಡ್ ಫಿನಾಲೆವರೆಗೆ ಇರಲಿದ್ದಾರೆ ಎಂಬ ಕೌತುಕಕ್ಕೆ ಬ್ರೇಕ್ ಬಿದ್ದಿದೆ.

error: Content is protected !!