GOOD NEWS | ಅಂತೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾಲ ಕೂಡಿ ಬಂತು, ಯಾವಾಗಿಂದ ಶುರು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈಗಾಗಲೇ ಆನ್‍ಲೈನ್ ಮೂಲಕ ದಾಖಲಾತಿ ಮಾಡಿಕೊಂಡ 18 ರಿಂದ 45 ವರ್ಷದ ಫಲಾನುಭವಿಗಳಿಗೆ ಮೇ 10ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ ಮೇ 11ರಂದು ಇತರ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದ್ದಾರೆ.

https://www.suddikanaja.com/2021/04/18/adondittu-kala-movie-shooting-in-thirthahalli/

ಈಗಾಗಲೇ ಹೆಸರು ನೋಂದಾಯಿಸಿಕೊಂಡವರ ಮೊಬೈಲ್‍ಗೆ ಲಸಿಕಾ ಕೇಂದ್ರ ಹಾಗೂ ಲಸಿಕೆ ನೀಡುವ ಸಮಯವನ್ನು ಕಳುಹಿಸಲಾಗುವುದು. ಅಂತಹವರು ಮಾತ್ರ ಲಸಿಕಾ ಕೇಂದ್ರಕ್ಕೆ ಬರಬೇಕು.
ತಲಾ 150 ಮಂದಿಗೆ ಲಸಿಕೆ | ಮೇ 10ರಂದು ಮೆಗ್ಗಾನ್‍ನಲ್ಲಿರುವ ಎರಡು ಲಸಿಕಾ ಕೇಂದ್ರಗಳಲ್ಲಿ ತಲಾ 150 ಮಂದಿಗೆ ಮಧ್ಯಾಹ್ನ 2 ಗಂಟೆ ಬಳಿಕ ಲಸಿಕೆ ನೀಡಲಾಗುವುದು. ಮೇ 11ರಂದು ಬೆಳಿಗ್ಗೆ 10ಗಂಟೆಯಿಂದ ಲಸಿಕೆ ನೀಡಲಾಗುವುದು.
ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮೇ 11ರಂದು ಬೆಳಗ್ಗೆ 10 ಗಂಟೆಯಿಂದ ತಲಾ 150 ಮಂದಿಗೆ ಲಸಿಕೆ ನೀಡಲಾಗುವುದು. ಫಲಾನುಭವಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ.
ಲಸಿಕೆ ಕೇಂದ್ರ ಬದಲು | ಈ ಹಿಂದೆ ಮೆಗ್ಗಾನ್ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ನೀಡುವ ಕೇಂದ್ರವನ್ನು ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ತರಬೇತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

https://www.suddikanaja.com/2021/03/04/dowry-harassment-two-person-conviction/

error: Content is protected !!