ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಗರ ಜಂಬಗಾರು- ಆನಂದಪುರ ಹಾಗೂ ಕುಂಸಿ- ಆನಂದಪುರ ಸ್ಟೇಷನ್ ನಡುವೆ ಲೆವಲ್ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಪರ್ಯಾಯ ಮಾರ್ಗ ಕಲ್ಪಿಸಿ ಆದೇಶಿಸಲಾಗಿದೆ.
ಸಾಗರ ಜಂಬಗಾರು-ಆನಂದಪುರ ಸ್ಟೇಷನ್ ನಡುವೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ ನಂ.132 ಕಿ.ಮಿ: 144/ 200-300 ಮತ್ತು ಕುಂಸಿ-ಆನಂದಪುರ ಸ್ಟೇಷನ್ ನಡುವೆ ಬರುವ ಎಲ್.ಸಿ ನಂ. 105 ಕಿ.ಮೀ: 117/000-100 ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಸೆ.13 ರಿಂದ ಸೆ.15ರವರೆಗೆ ಮತ್ತು ಸೆ.20ರಿಂದ ಸೆ.22ರವರೆಗೆ ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸ ಕಲ್ಪಿಸಲಾಗಿದೆ.
READ | ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮರ್ಪಣಾ ಸಮಾರಂಭ
ಯಾವ ದಿನ ಯಾವ ಮಾರ್ಗದಲ್ಲಿ ಸಂಚಾರಕ್ಕೆ ತಡೆ?
- ಸೆ.13 ರಿಂದ 15ರವರೆಗೆ ಸಾಗರ ಜಂಬಗಾರು -ಆನಂದಪುರ ಮಧ್ಯ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ 132 ಅನ್ನು ತೆರದು ಪರಿಶೀಲನೆ ಮಾಡುವ ಸಂದರ್ಭದಲ್ಲಿ ವಾಹನಗಳು ಸೊರಬ ರಸ್ತೆಯ ಮೂಲಕ ರೈಲ್ವೆ ಲೆವೆಲ್ ಕ್ರಾಸ್ ಗೇಟ್ 130ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.
- ಸೆ.20 ರಿಂದ ಸೆ. 22ರವರೆಗೆ ಕುಂಸಿ – ಆನಂದಪುರ ಮಧ್ಯೆ ಬರುವ – ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 105 ಅನ್ನು ತೆರೆದು ತಾಂತ್ರಿಕ ಪರಿಶೀಲನೆ ಮಾಡುವ ಸಂದರ್ಭದಲ್ಲಿ ವಾಹನಗಳು ಆನಂದಪುರ -ಎಡೇಹಳ್ಳಿ – ಹೆಬ್ಬೆಲ್ ರಸ್ತೆ- ಅಡೂರು -ಕೋಣನತಲೆ- ಹೊಸೂರು ಮೂಲಕ ರೈಲ್ವೆ ಲೆವಲ್ ಕ್ರಾಸ್ ಗೇಟ್ ನಂ: 104 ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿರುತ್ತದೆ.
ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಈ ಮೇಲ್ಕಂಡ ದಿನಾಂಕಗಳಲ್ಲಿ ಮಾತ್ರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಿದೆ.