ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೆ.15ರಂದು ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ (mescom) ಪ್ರಕಟಣೆಯಲ್ಲಿ ಕೋರಲಾಗಿದೆ.
READ | ಶಿಕ್ಷಣ ಸಚಿವರ ಪ್ರಮುಖ ಘೋಷಣೆ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗೊಂದು ಶಾಲೆ ಆರಂಭ
ಎಲ್ಲೆಲ್ಲಿ ಕರೆಂಟ್ ಇರಲ್ಲ?
- ಶಿವಮೊಗ್ಗ ಎಂ.ಆರ್.ಎಸ್ 110/11 ಕೆವಿ ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎಫ್-7 ಪಿಳ್ಳಂಗಿರಿ ಎನ್.ಜೆ.ವೈ ಮತ್ತು ಎಫ್-8 ಜಾವಳ್ಳಿ ಐಪಿ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಕಂಡ ಗ್ರಾಮಗಳಲ್ಲಿ ಸೆ.15ರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದ ಬಿ.ಹೆಚ್ ರಸ್ತೆ, ಅಮೀರ್ ಅಹಮದ್ ವೃತ್ತ, ಕೋಟೆ ರಸ್ತೆ, ಎಸ್,ಪಿ,ಎಂ ರಸ್ತೆ, ಓ.ಬಿ.ಎಲ್ ರಸ್ತೆ, ಗಾಂಧಿ ಬಜಾರ್, ಕೆ.ಆರ್.ಪುರಂ, ಪೆನ್ಷನ್ ಮೊಹಲ್ಲಾ, ಎಂ.ಕೆ.ಕೆ ರಸ್ತೆ, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ, ಆನವೇರಪ್ಪನ ಕೇರಿ, ಎಲಕಪ್ಪನ ಕೇರಿ, ತಿರುಪಳಯ್ಯನ ಕೇರಿ, ಎಲೆ ರೇವಣ್ಣನ ಕೇರಿ, ಶಿವಾಜಿ ರಸ್ತೆ, ಧರ್ಮರಾಯನ ಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
- ಶಿವಮೊಗ್ಗ ತಾಲೂಕು ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಾಹಕ ಬದಲಾವಣೆ ಮತ್ತು ಮಧ್ಯಂತರ ಕಂಬಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.15 ರ ಬೆಳಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗುಡ್ರಕೊಪ್ಪ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ನವುಲೆಬಸಾಪುರ, ಹೊನ್ನವಿಲೆ, ಮತ್ತಿಘಟ್ಟ, ಹಾಥಿಕಟ್ಟೆ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
- ಶಿವಮೊಗ್ಗ ಎಂ.ಆರ್.ಎಸ್ 110/11 ಕೆವಿ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಸೆ.15 ರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಂ.ಆರ್.ಎಸ್ ವಾಟರ್ ಸಪ್ಲೇ, ಎಂ.ಆರ್.ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಜ್ಯೋತಿನಗರ, ವಿದ್ಯಾನಗರ, ಕಂಟ್ರಿ ಕ್ಲಬ್ ರಸ್ತೆ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಮತ್ತು ಬಿ.ಹೆಚ್ ರಸ್ತೆ, ನೆಹರು ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಪಾರ್ಕ್ ಬಡಾವಣೆ, ತಿಲಕ್ ನಗರ, ಸರ್.ಎಂ.ವಿ ರಸ್ತೆ, ಬಾಲ್ರಾಜ್ ಅರಸ್ ರಸ್ತೆ, ಗಾಂಧಿ ಪಾರ್ಕ್, ಲೂರ್ದು ನಗರ, ಕಾನ್ವಂಟ್ ರಸ್ತೆ, ಬಾಪುಜಿ ನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್ ಬಡಾವಣೆ, ಟ್ಯಾಂಕ್ ಬೌಂಡ್ ರಸ್ತೆ ಹಾಗೂ ಮೀನಾಕ್ಷಿ ಭವನದ ಸುತ್ತಮುತ್ತಲಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.