ಸುದ್ದಿ ಕಣಜ.ಕಾಂ
ಭದ್ರಾವತಿ: ಸ್ಮಶಾನಕ್ಕೆ ಜಾಗ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿ ಕೊರೊನಾದಿಂದ ಮೃತಪಟ್ಟ ಮಹಿಳೆ ಶವವಿಟ್ಟು ಗುರುವಾರ ಪ್ರತಿಭಟನೆ ಮಾಡಲಾಯಿತು.
READ | ರಸ್ತೆ ಮೇಲೆ ತರಕಾರಿ ಸುರಿದ ಮಾರಾಟಗಾರ, ಪೊಲೀಸ್ ಸಮ್ಮುಖದಲ್ಲಿ ವ್ಯಾಪಾರಿಯಿಂದಲೇ ಕ್ಲೀನ್
ಕಂದಾಯ ಅಧಿಕಾರಿ ಜಗದೀಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಜಗನ್ನಾಥ್ ಅವರು ಸ್ಥಳಕ್ಕೆ ಬಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಸ್ಮಶಾನಕ್ಕಾಗಿ ಖರೀದಿಗೆ ಒಪ್ಪಿಗೆಯಾಗಿರುವ ಜಾಗದಲ್ಲಿ ಮಹಿಳೆಯ ಶವ ಸಂಸ್ಕಾರ ನೆರವೇರಿತು.
ಗ್ರಾಪಂ ಉಪಾಧ್ಯಕ್ಷೆ ಶಾಂತಾಬಾಯಿ, ಮುಖಂಡರಾದ ಉಮಾ ಸುರೇಶ್, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
https://www.suddikanaja.com/2021/03/15/fraud-case-in-cyber-crime-station/