ಸೋಂಕು ತಗ್ಗಿದರೂ ಮುಂದುವರಿದ ಕೊರೊನಾ ಮಾರಣ ಹೋಮ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಮಾರಣ ಹೋಮ ಜಿಲ್ಲೆಯಲ್ಲಿ ಮುಂದುವರಿದಿದ್ದು, ಭಾನುವಾರ 12 ಜನ ಮೃತಪಟ್ಟಿದ್ದಾರೆ.

READ | ಜೂನ್ 1ರಿಂದ ಗ್ರಾಹಕರಿಗೆ ಸಿಗಲಿದೆ ನಂದಿನಿ Extra ಹಾಲು, ಶಿಮುಲ್ ವ್ಯಾಪ್ತಿಯ 3 ಜಿಲ್ಲೆಯವರಿಗೆ ಪ್ರಾಫಿಟ್

629 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 10 ವಿದ್ಯಾರ್ಥಿಗಳು, 1 ಸಿಬ್ಬಂದಿ ಇದ್ದಾರೆ. 645 ಜನ ಗುಣಮುಖರಾಗಿದ್ದಾರೆ.
1,193 ಮಾದರಿಯನ್ನು ಪಡೆದಿದ್ದು, 1,535 ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 641 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 322, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,450, ಖಾಸಗಿ ಆಸ್ಪತ್ರೆಯಲ್ಲಿ 1,484, ಹೋಮ್ ಐಸೋಲೇಷನ್‌ ನಲ್ಲಿ 2,463, ಟ್ರಿಯೇಜ್‌ ನಲ್ಲಿ 870 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,230 ಇದೆ.
ತಾಲೂಕುವಾರು ವರದಿ | ಶಿವಮೊಗ್ಗ 213, ಭದ್ರಾವತಿ 120, ತೀರ್ಥಹಳ್ಳಿ 92, ಶಿಕಾರಿಪುರ 69, ಸಾಗರ 62, ಹೊಸನಗರ 42, ಸೊರಬ 15, ಬಾಹ್ಯ ಜಿಲ್ಲೆಯ 13 ಪ್ರಕರಣಗಳಿವೆ.

https://www.suddikanaja.com/2021/04/22/corona-case-increasing-in-shivamogga/

error: Content is protected !!