ಲಸಿಕೆ ಪಡೆಯಲು ಬೆಳಗ್ಗೆ 6ರಿಂದಲೇ ಕ್ಯೂ, ಶುಗರ್, ಬಿಪಿ ಇರೋರಿಗೆ ಸಂಕಷ್ಟ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಸಿಕೆ ಪಡೆಯುವುದಕ್ಕೆ ಶಿವಮೊಗ್ಗ ವೈದ್ಯಕೀಯ ವಿಜ್ಷಾನಗಳ ಸಂಸ್ಥೆ(ಸಿಮ್ಸ್)ನಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಸರತಿ ಇದೆ.

https://www.suddikanaja.com/2021/05/14/banana-stem-entrepreneur/

ಬೆಳಗ್ಗೆ 6 ಗಂಟೆಯಿಂದಲೇ ಜನರು ನಾನಾ ಕಡೆಗಳಿಂದ ಇಲ್ಲಿಗೆ ಬಂದು ಕಾಯುತ್ತಿದ್ದಾರೆ. ಆದರೆ, ನಿತ್ಯ 150ರಿಂದ 200 ಲಸಿಕೆಗಳನ್ನು ಮಾತ್ರ ಇಲ್ಲಿ ನೀಡುತ್ತಿರುವುದರಿಂದ ಬಂದವರು ದಾರಿಗೆ ಸುಂಕವಿಲ್ಲವೆಂಬಂತೆ ಹಿಡಿಶಾಪ ಹಾಕುತ್ತ ಹಿಂದಿರುಗುತಿದ್ದಾರೆ.
ಕೊರೊನಾ ಸೋಂಕು ವೇಗವಾಗಿ ಹರುಡುತ್ತಿರುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ವಿವಿಧ ವಯಸ್ಸಿನವರು ಸಿಮ್ಸ್ ಮುಂಭಾಗದಲ್ಲಿ ಬಂದು ನಿಂತರೆ ಆಡಳಿತ ವರ್ಗ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ ಎನ್ನುವುದು ಸಾರ್ವಜನಿಕರು ಆರೋಪವಾಗಿದೆ.
ಬೆಳಗ್ಗೆ 6 ಗಂಟೆಗೆ ಬಂದವರಿಗೆ ಟೋಕನ್ ನೀಡುವುದು 9 ಗಂಟೆಗೆ 10 ರಿಂದ ಲಸಿಕೆ ನೀಡುವ ಕಾರ್ಯಾರಂಭವಾಗುತ್ತದೆ. ಮಧ್ಯಾಹ್ನವಾದರೂ ಲಸಿಕೆ ಸಿಗುತ್ತದೆ ಎಂಬ ಭರವಸೆ ಇಲ್ಲ. ಇದರಿಂದ ಜನರು ಬೇಸತ್ತಿದ್ದಾರೆ.

ಹೀಗಾಗಿ, ‘ಟೋಕನ್ ಅನ್ನು ಬೆಳಗ್ಗೆ 7 ಗಂಟೆಯಿಂದ ನೀಡಲು ಆರಂಭಿಸಿದರೆ ಸರತಿಯಲ್ಲಿರುವವರು ಟೋಕನ್ ಪಡೆದು ಮನೆಗೆ ಹೋಗಿ ಬರಬಹುದು. ಇದರಿಂದ, ಬಿಪಿ, ಶುಗರ್ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ ಎನ್ನುವುದು ಲಸಿಕೆ ಪಡೆಯಲು ಬಂದ ಸಾರ್ವಜನಿಕರ ಆಗ್ರಹವಾಗಿದೆ.

ನಿನ್ನೆಯೂ ಗೊಂದಲ | ಸಿಮ್ಸ್‍ನಲ್ಲಿ ಭಾನುವಾರ ಲಸಿಕೆ ಪಡೆಯಲು ಬಂದವರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಟೋಕನ್ ನೀಡುವಾಗ 200 ಲಸಿಕೆ ನೀಡುವುದಾಗಿ ಹೇಳಿ ನಂತರ ಲಸಿಕೆ ಇಲ್ಲ. ಹೀಗಾಗಿ, 150 ಮಾತ್ರ ಕೊಡುವುದಾಗಿ ಅಲ್ಲಿಯ ಸಿಬ್ಬಂದಿ ತಿಳಿಸಿದ್ದರು. ಇದರಿಂದಾಗಿ, ಜಗಳ, ಮಾತಿನ ಚಕಮಕಿ ನಡೆದ ಬಳಿಕ ಇನ್ನೈವತ್ತು ನೀಡುವುದಾಗಿ ತಿಳಿಸಲಾಗಿದೆ. ಈ ಎಲ್ಲವುಗಳ ಬಗ್ಗೆ ಸಿಮ್ಸ್ ಆಡಳಿತ ಗಮನ ಹರಿಸಬೇಕು ಎಂಬುವುದು ಜನರ ಮನವಿಯಾಗಿದೆ.

https://www.suddikanaja.com/2020/12/18/que-for-covid-test-in-shivamogga/

error: Content is protected !!