ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಡಿವೈಎಸ್‍ಪಿ ಸೇರಿ ಹಲವರ ಟ್ರಾನ್ಸ್ ಫರ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ತೀರ್ಥಹಳ್ಳಿ ಉಪ ವಿಭಾಗಕ್ಕೆ ಡಿವೈಎಸ್‍ಪಿಯಾಗಿ ಶಾಂತವೀರ ಅವರನ್ನು ಸರ್ಕಾರ ನೇಮಿಸಿದೆ. ಅದೇ ರೀತಿ, ಮಹಿಳಾ ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಆಗಿದ್ದ ಅಭಿಯ್ ಪ್ರಕಾಶ್ ಸೋಮನಾಳ್ ಅವರಿಗೆ ಕುಂಸಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯ ಮುರುಗೇಶ್ ಅವರನ್ನು ಲೋಕಾಯುಕ್ತಕ್ಕೆ ಹಾಗೂ ಲೋಕಾಯುಕ್ತದಲ್ಲಿದ್ದ ಆರ್.ಎಲ್.ಲಕ್ಷ್ಮೀಪತಿಗೆ ಹೊಳೆಹೊನ್ನೂರು ಠಾಣೆಗೆ, ಕುಂಸಿ ಠಾಣೆ ಇನ್‍ಸ್ಪೆಕ್ಟರ್ ಸಂಜೀವ್ ಕುಮಾರ್ ಅವರನ್ನು ಗ್ರಾಮಾಂತರಕ್ಕೆ, ಭದ್ರಾವತಿ ಗ್ರಾಮಾಂತರ ಠಾಣೆಯ ಇನ್‍ಸ್ಪೆಕ್ಟರ್ ಇ.ಒ.ಮಂಜುನಾಥ್ ಅವರನ್ನು ಪೇಪರ್ ಟೌನ್‍ಗೆ ವರ್ಗಾವಣೆ ಮಾಡಲಾಗಿದೆ. ಜತೆಗೆ, ವಿವಿಧ ಹುದ್ದೆಯ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

error: Content is protected !!